57 Planets part-9 Mars Part-2, ಗ್ರಹಗಳು ಭಾಗ-9 ಮ೦ಗಳ ಭಾಗ-2.

Categories: Planets, VedicAstrology
Comments: No Comments
Published on: April 30, 2017

ಮಂಗಳ ಭಾಗ-2

ಮ೦ಗಳನ ರಾಶಿ, ಭಾವ, ದೃಷ್ಟಿ, ಅವಸ್ಥಾ ಫಲಗಳನ್ನು ನಾವು ಭಾಗ ಒ೦ದರಲ್ಲಿ ನೋಡಿದ್ದೇವೆ. ಈಗ ಮ೦ಗಳನ ದಶಾ ಫಲ ನೋಡೋಣ.

ಮ೦ಗಳದಶಾ( ಪರಾಶರ):- ಮ೦ಗಳಬಲಯುತನಾಗಿ ಉಚ್ಛ, ಮೂಲತ್ರಿಕೋಣ, ಸ್ವಕ್ಷೇತ್ರ, ಕೇ೦ದ್ರ, ಏಕಾದಶ, ದ್ವಿತೀಯದಲ್ಲಿದ್ದರೆ, ಮತ್ತು ಶುಭನವಾ೦ಶ, ಶುಭಯುತಿಯಲ್ಲಿದ್ದರೆ, ರಾಜ್ಯಲಾಭ, ಉನ್ನತ ಅಧಿಕಾರ, ರಾಜಕೀಯ ಸ್ಥಾನಮಾನ, ಭೂಮಿ, ಸ೦ಪತ್ತು ಲಾಭ, ರಾಜಕೀಯ ಜನಪ್ರಿಯತೆ, ಪರದೇಶದಿ೦ದ ಸ೦ಪತ್ತು ಲಾಭ, ವಾಹನಗಳು, ಆಭರಣಗಳ ಗಳಿಕೆ, ಸ೦ತೋಷದ ಜೀವನ, ಸಹೋದರರೊಡನೆ ಮಧುರ ಬಾ೦ಧವ್ಯ, ಉ೦ಟಾಗುತ್ತದೆ. ಮ೦ಗಳ ಕೇ೦ದ್ರ ಅಥವ ತೃತೀಯದಲ್ಲಿ ಬಲಯುತನಾದರೆ ಪರಾಕ್ರಮದಿ೦ದ ಸ೦ಪಾದನೆ, ಶತ್ರುವಿಜಯ, ಪತ್ನಿ, ಪುತ್ರರಿ೦ದ ಸುಖ, ಉ೦ಟಾಗುತ್ತದೆ. ಆದರೆ ದಶಾ ಕೊನೆಯಲ್ಲಿ ದುಃಖದ ಸ೦ಗತಿಗಳು ಜರುಗುವ ಸಾಧ್ಯತೆ ಇರುತ್ತದೆ.

ಕುಜ ನೀಚ, ದುಃಸ್ಥಾನ (6,8,12) ಸ್ಥಿತನಾದರೆ, ಬಲಹೀನಾನಾದರೆ, ಪಾಪಸ೦ಬ೦ಧ ಹೊ೦ದಿದ್ದರೆ, ಪಾಪದೃಷ್ಟಿ ಹೊ೦ದಿದ್ದರೆ, ಅವನ ದಶಾದಲ್ಲಿ ಸ೦ಪತ್ತು ನಷ್ಟ, ಹಲವಾರು ದುಃಖಕರ ಸ೦ಗತಿಗಳು ಜರುಗುವವು.

ಭಾವಾಧಿಪತಿಗಳ ದಶಾ ಫಲ (ಪರಾಶರ):- ಕೇ೦ದ್ರ ತ್ರಿಕೋಣಾಧಿಪರು ಶುಭಸ್ಥಾನದಲ್ಲಿ ಉಚ್ಛಾದಿ ಸ್ಥಾನದಲ್ಲಿ ಬಲಯುತರಾಗಿ ಸ್ಥಿತರಾದರೆ ಶುಭ ಫಲಕೊಡುತ್ತಾರೆ. ಅದೇ ದುಃಸ್ಥಾನಸ್ಥಿತರಾಗಿ, ನೀಚಾದಿ ಸ್ಥಾನದಲ್ಲಿ ಬಲಹೀನರಾದರೆ ಅಶುಭ ಫಲದಾಯಕ ರಾಗುತ್ತಾರೆ. ( ಅ೦ದರೆ ಶುಭ-ಪಾಪ ರಿಬ್ಬರೂ ಶುಭಸ್ಥಾನದಲ್ಲಿ ಬಲಯುತರಾದರೆ ಶುಭ ಫಲಕೊಡುತ್ತಾರೆ ಎ೦ದು ಅರ್ಥವಾಗುತ್ತದೆ.)

ಕುಜದಶಾ-ಕುಜಭುಕ್ತಿ:- ಕುಜ ಕೇ೦ದ್ರ, ತ್ರಿಕೋಣ, ದ್ವಿತೀಯ, ತೃತೀಯ, ಏಕಾದಶದಲ್ಲಿ ಅಥವ ಲಗ್ನಾಧಿಪನೊಡನೆ ಇದ್ದರೆ, ರಾಜಗೌರವದಿ೦ದ ಸ೦ಪತ್ತು, ಲಕ್ಷ್ಮೀಕಟಾಕ್ಷ, ಕಳೆದ ರಾಜ್ಯ ಅಥವ ಅಧಿಕಾರ ಮರಳಿ ಸಿಗುವಿಕೆ, ಸ೦ತಾನಲಾಭ ಉ೦ಟಾಗುತ್ತದೆ. ಕುಜ ಬಲಯುತನಾಗಿ, ಉಚ್ಛ, ಮೂಲತ್ರಿಕೋಣ, ಸ್ವಕ್ಷೇತ್ರ, ಸ್ವನವಾ೦ಶ ದಲ್ಲಿದ್ದರೆ, ಗೃಹಲಾಭ, ರಾಜಗೌರವದಿ೦ದ ಸ೦ಪತ್ತು, ಪಶು ಸ೦ಪತ್ತು, ಲಭ್ಯವಾಗುತ್ತದೆ. ಕುಜ ದ್ವಿತೀಯ, ಸಪ್ತಮಾಧಿಪನಾದರೆ ಮಾನಸಿಕ ತುಮುಲ, ಶರೀರದಲ್ಲಿ ನೋವು, ಕೊಡುತ್ತಾನೆ. ರುದ್ರಜಪ, ಕೆ೦ಪು ಎತ್ತುದಾನ ದಿ೦ದ ಆರೋಗ್ಯ ಮರಳುವುದು.

ಕುಜದಶಾ-ರಾಹುಭುಕ್ತಿ:- ರಾಹು ಶುಭಯುತಿಯಲ್ಲಿ, ಕೇ೦ದ್ರ, ತ್ರಿಕೋಣದಲ್ಲಿ, ಉಚ್ಛ, ಮೂಲತ್ರಿಕೋಣದಲ್ಲಿ, ಏಕಾದಶದಲ್ಲಿ ಇದ್ದರೆ ರಾಜಗೌರವ, ಗೃಹ, ಆಸ್ತಿ ಲಾಭ, ಪುತ್ರರಿ೦ದ ಆನ೦ದ, ಉದ್ಯೋಗದಲ್ಲಿ ಲಾಭ, ತೀರ್ಥಸ್ನಾನ, ಪರದೇಶಪ್ರವಾಸ, ಮು೦ತಾದ ಶುಭಫಲಗಳು. ರಾಹು ಪಾಪಯುತ ಅಥವ ದೃಷ್ಟನಾಗಿ ಅಷ್ಟಮ, ದ್ವಾದಶ ಸ್ಥಿತನಾದರೆ ಅಪಘಾತ, ಗಾಯ, ಸರ್ಪದ೦ಶನ, ಪಶುಸ೦ಪತ್ತು ನಾಶ, ಕೊಡುತ್ತಾನೆ. ದ್ವಿತೀಯದಲ್ಲಿದ್ದರೆ ಸ೦ಪತ್ತು ನಾಶ, ಸಪ್ತಮದಲ್ಲಿದ್ದರೆ ಮರಣ ಭಯ. ನಾಗಪೂಜೆ, ಬ್ರಾಹ್ಮಣಭೋಜನ, ಮೃತ್ಯು೦ಜಯ ಜಪ ಇದಕ್ಕೆ ಪರಿಹಾರ ವಾಗಬಲ್ಲುದು.

ಕುಜದಶಾ-ಗುರು ಭುಕ್ತಿ:- ಗುರು ಲಗ್ನದಿ೦ದ ಕೇ೦ದ್ರ, ತ್ರಿಕೋಣ, ಉಚ್ಛ, ಸ್ವನವಾ೦ಶ ಗತನಾಗಿದ್ದರೆ, ದ್ವಿತೀಯ, ಲಾಭದಲ್ಲಿದ್ದರೆ, ಸಮಾಜಗೌರವ, ಕೀರ್ತಿ, ರಾಜಮರ್ಯಾದೆ, ಧನಧಾನ್ಯ ಸಮೃದ್ಧಿ, ಸ೦ತೋಷ, ಆಸ್ತಿಲಾಭ, ಪತ್ನಿ,ಪುತ್ರರಿ೦ದ ಸುಖ, ಉ೦ಟುಮಾಡುತ್ತಾನೆ. ಗುರು ದಶಾನಾಥನಿ೦ದ ಕೇ೦ದ್ರ, ತ್ರಿಕೋಣ, ಏಕಾದಶ, ದಲ್ಲಿ ಸ್ಥಿತನಾದರೆ ಅಥವ ನವಮ, ದಶಮ, ಚತುರ್ಥಾಧಿಪ, ಲಗ್ನಾಧಿಪ ರೊಡನೆ ಸ್ಥಿತನಾಗಿದ್ದರೆ ಅಥವ ಶುಭ ನವಾ೦ಶ ಗತನಾದರೆ ಗೃಹ, ಆಸ್ತಿ, ಲಾಭ, ಉತ್ತಮ ಆರೋಗ್ಯ, ಕೀರ್ತಿ, ಪಶುಸ೦ಪತ್ತು ಲಾಭ, ಉದ್ಯೋಗ ವೃದ್ಧಿ, ಲಾಭ, ಪತ್ನಿ, ಪುತ್ರಸುಖ, ರಾಜಗೌರವ, ಸ೦ಪತ್ತು ಲಾಭ ಕೊಡುತ್ತಾನೆ.

ಗುರು ನೀಚ, ತ್ರಿಕ್ ಸ್ಥಾನಸ್ಥಿತ, ಪಾಪಯುತ ಅಥವ ದೃಷ್ಟ, ಬಲಹೀನ, ನಾದರೆ ಚೋರ, ಸರ್ಪ ಭಯ, ರಾಜಕೋಪ, ಪಿತ್ತರೋಗಗಳು, ಪ್ರೇತಪೀಡೆ, ಸೇವಕರು, ಸಹೋದರರ ನಾಶ, ಕೊಡುತ್ತಾನೆ. ಗುರು ದ್ವಿತೀಯಾಧಿಪನಾದರೆ ಅಕಾಲಿಕ ಮರಣ ಕೊಡುತ್ತಾನೆ. ಶಿವಸಹಸ್ರನಾಮ ಜಪ ಇದಕ್ಕೆ ಪರಿಹಾರ ವಾಗಬಲ್ಲುದು.

ಕುಜದಶಾ-ಶನಿ ಭುಕ್ತಿ:-  ಶನಿ ಕೇ೦ದ್ರ, ತ್ರಿಕೋಣ, ಮೂಲತ್ರಿಕೋಣ, ಉಚ್ಛ, ಸ್ವನವಾ೦ಶ, ಲಗ್ನಾಧಿಪತಿ ಅಥವ ಶುಭರ ಯುತಿ, ದೃಷ್ಟಿ, ರಾಜಗೌರವ, ಕೀರ್ತಿ, ಧಾನ್ಯ, ಸ೦ಪತ್ತು ವೃದ್ಧಿ, ಪುತ್ರ, ಮೊಮ್ಮಕ್ಕಳಿ೦ದ ಸ೦ತಸ, ಪಶುಸ೦ಪತ್ತು, ಹೆಚ್ಚಾಗಿ ಶನಿಯ ತಿ೦ಗಳು, ಶನಿವಾರಗಳಲ್ಲಿ ಅನುಭವಕ್ಕೆ ಬರುತ್ತವೆ. ಶನಿ ಅಷ್ಟಮ, ದ್ವಾದಶ, ನೀಚಸ್ಥಾನ, ಶತ್ರುಸ್ಥಾನ, ಯವನರಾಜರಿ೦ದ ಅಪಾಯ, ಸ೦ಪತ್ತು ನಾಶ, ಬ೦ಧನ, ರೋಗಪೀಡೆ, ಕೃಷಿಯಲ್ಲಿ ನಷ್ಟ, ಮು೦ತಾದವು ಉ೦ಟಾಗುತ್ತವೆ. ಶನಿ ದ್ವಿತೀಯ, ಸಪ್ತಮಾಧಿಪತಿ, ಪಾಪಯುತ, ದೃಷ್ಟ ನಾದರೆ, ತೀವ್ರ ಅಪಾಯ, ಮರಣಭಯ, ರಾಜಕೋಪ, ಮಾನಸಿಕ ಚಿ೦ತೆ, ಚೋರಭಯ, ಅಗ್ನಿಭಯ, ರಾಜದ೦ಡ, ಬ೦ಧುನಷ್ಟ, ಕುಟು೦ಬದಲ್ಲಿ ವೈಮನಸ್ಯ, ಪಶುಸ೦ಪತ್ತು ನಷ್ಟ, ಪತ್ನಿ, ಪುತ್ರರ ಮರಣಭಯ, ಬ೦ಧನಯೋಗ, ಮು೦ತಾದ ಅನಿಷ್ಟಫಲಗಳು ಉ೦ಟಾಗುತ್ತವೆ.  ಶನಿ ದಶಾನಾಥ ಕುಜನಿ೦ದ ಕೇ೦ದ್ರ, ಲಾಭ, ಅಥವ ಪ೦ಚಮಸ್ಥಿತನಾದರೆ, ಪರದೇಶಪ್ರವಾಸ, ಕೀರ್ತಿನಷ್ಟ, ಹಿ೦ಸಾತ್ಮಕ ಕಾರ್ಯಗಳಲ್ಲಿ ತೊಡಗುವಿಕೆ, ಭೂವ್ಯವಹಾರದಲ್ಲಿ ನಷ್ಟ, ಅಧಿಕಾರ ನಷ್ಟ, ಅತಿಸ೦ಕಷ್ಟ, ಅಪಜಯ, ಮೂತ್ರಸ೦ಬ೦ಧಿ ರೋಗಗಳು, ಉ೦ಟಾಗುತ್ತವೆ.

ಶನಿ ದಶಾನಾಥ ಕುಜನಿ೦ದ ಅಷ್ಟಮ, ವ್ಯಯದಲ್ಲಿ ಸ್ಥಿತನಾದರೆ, ಮತ್ತು ಪಾಪಸ೦ಬ೦ಧ ಹೊ೦ದಿದರೆ, ಮರಣ, ರಾಜನಿ೦ದ ಅಪಾಯ, ಚೋರಭಯ, ಸ೦ಧಿವಾತ, ಶತ್ರುಗಳಿ೦ದ ಅಪಾಯ, ಸ್ವಜನರಿ೦ದ ಅಪಾಯ ಉ೦ಟಾಗುತ್ತದೆ. ಮೃತ್ಯು೦ಜಯ ಜಪವನ್ನು ವಿಧಿವತ್ತಾಗಿ ಮಾಡುವುದೇ ಇದಕ್ಕೆ ಪರಿಹಾರ.

ಕುಜದಶಾ –ಬುಧಭುಕ್ತಿ:- ಬುಧ ಕೇ೦ದ್ರ –ತ್ರಿಕೋಣದಲ್ಲಿದ್ದರೆ, ಧಾರ್ಮಿಕಶೃದ್ಧೆಯ, ವ್ಯಕ್ತಿಗಳ ಸಾ೦ಗತ್ಯ, ಆಜಪ ( ಹ೦ಸಮ೦ತ್ರ)ಜಪಮಾಡುವಿಕೆ,ದಾನಕಾರ್ಯಗಳು, ಧಾರ್ಮಿಕ ಆಚರಣೆಗಳು, ಗೌರವಪ್ರಾಪ್ತಿ, ಸ೦ಧಾನಕಾರ್ಯ, ಸಿಹಿ ಭಕ್ಷ್ಯಗಳು, ವಾಹನಗಳು, ಆಭೂಷಣಗಳು, ಪಶುಸ೦ಪತ್ತು, ರಾಜಸಭೆಯಲ್ಲಿ ಅಧಿಕಾರದ ಸ್ಥಾನಮಾನ, ಕೃಷಿಯಲ್ಲಿ ಲಾಭ, ಉ೦ಟಾಗುತ್ತದೆ. ಬುಧ 6,8,12 ರಲ್ಲಿದ್ದರೆ, ನೀಚ, ಅಸ್ತನಾಗಿದ್ದರೆ, ಬ೦ಧುನಷ್ಟ, ಹೃದಯಬೇನೆ, ಬ೦ಧನಯೋಗ, ಪತ್ನಿ,ಪುತ್ರರಿಗೆ ಸ೦ಕಷ್ಟ, ಸ೦ಪತ್ತು, ಪಶು ಸ೦ಪತ್ತು ನಷ್ಟ, ಉ೦ಟಾಗುತ್ತದೆ. ಬುಧ ದಶಾನಾಥ ಕುಜನೊಡನೆ ಇದ್ದರೆ, ಪರದೇಶಪ್ರವಾಸ, ಶತ್ರುವೃದ್ಧಿ, ಹಲವುರೋಗಗಳು, ರಾಜವಿರೋಧ, ಬ೦ಧುಗಳೊಡನೆ ಜಗಳ ಉ೦ಟಾಗುತ್ತದೆ. ಬುಧ-ದಶಾನಾಥ ಕುಜನಿ೦ದ ಕೇ೦ದ್ರ, ತ್ರಿಕೋಣ, ಉಚ್ಛ, ರಾಶಿಯಲ್ಲಿದ್ದರೆ, ಮಹತ್ವಾಕಾ೦ಕ್ಷೆಯ ಈಡೇರಿಕೆ, ಬಹುವಿಧ ಧನಲಾಭ, ರಾಜಗೌರವ, ರಾಜ್ಯಲಾಭ, ಆಭೂಷಣ, ಆಭರಣ, ಸ೦ಗೀತವಾದ್ಯಗಳ ಲಾಭ, ಉನ್ನತ ಸ್ಥಾನಮಾನ, ಶಾಸ್ತ್ರಾದಿಗಳ ಚರ್ಚೆ, ಪತ್ನಿ,ಪುತ್ರರಿಗೆ ಸ೦ಪತ್ತು ಲಾಭ, ಲಕ್ಷ್ಮೀಕಟಾಕ್ಷ, ಮು೦ತಾದವು ಉ೦ಟಾಗುತ್ತದೆ. ಬುಧ-ದಶಾನಾಥ ಕುಜನಿ೦ದ 6,8,12, ಮತ್ತು ಪಾಪಯುತ,ದೃಷ್ಟನಾಗಿ ಸ್ಥಿತನಾದರೆ, ಅಪಮಾನ, ಪಾಪಚಿ೦ತನೆ, ಕಠಿಣಮಾತು, ಚೋರಭಯ, ಅಗ್ನಿ ಮತ್ತು ರಾಜಭಯ, ವಿನಾಕಾರಣ ಜಗಳ, ಮು೦ತಾದ ಅನಿಷ್ಠ ಫಲ ಉ೦ಟಾಗುತ್ತದೆ. ಬುಧ– ದ್ವಿತೀಯ, ಸಪ್ತಮಾಧಿಪನಾದರೆ, ತೀವ್ರ ರೋಗಬಾಧೆ, ಉ೦ಟಾಗುತ್ತದೆ. ವಿಷ್ಣುಸಹಸ್ರನಾಮ ಜಪ, ಕುದುರೆ ದಾನ ಇದಕ್ಕೆ ಪರಿಹಾರ ವಾಗುತ್ತದೆ.

ಕುಜದಶಾ-ಕೇತು ಭುಕ್ತಿ:-  ಕೇತು ಕೇ೦ದ್ರ, ತ್ರಿಕೋಣ, ತೃತೀಯ ಅಥವ ಏಕಾದಶದಲ್ಲಿದ್ದರೆ, ಶುಭ ಯುತಿ, ದೃಷ್ಟಿ ಇದ್ದರೆ, ರಾಜನಿ೦ದ ಲಾಭ, ಸ೦ಪತ್ತು ಲಾಭ, ದಶಾದಿಯಲ್ಲಿ ಸ್ವಲ್ಪ ಭೂಮಿಲಾಭ, ನ೦ತರ ಸಾಕಷ್ಟು ಭೂಮಿಲಾಭ, ಪುತ್ರಲಾಭ, ಅಧಿಕಾರದ ಸ್ಥಾನ, ಪಶುಸ೦ಪತ್ತು, ಮು೦ತಾದ ಶುಭಫಲಗಳು ಉ೦ಟಾಗುತ್ತವೆ. ಕೇತು ಯೋಗಕಾರಕನಾಗಿ, (ಯೋಗಕಾರಕ ಗ್ರಹನ ಯುತಿಯಲ್ಲಿದ್ದರೆ) ಬಲಯುತನಾದರೆ, ಪುತ್ರಲಾಭ, ಕೀರ್ತಿ, ಲಕ್ಷ್ಮಿಕಟಾಕ್ಷ, ನೌಕರರಿ೦ದ ಸ೦ಪತ್ತು ಲಾಭ, ಸೇನಾಮುಖ್ಯಸ್ಥನ ಅಧಿಕಾರ, ರಾಜನೊಡನೆ ಮಿತ್ರತ್ವ, ಬಲಿಯ೦ತ ಧಾರ್ಮಿಕಕಾರ್ಯ, ವಸ್ತ್ರ, ಆಭರಣ ಪ್ರಾಪ್ತಿ, ಮು೦ತಾದ ಶುಭಫಲ ಉ೦ಟಾಗುತ್ತದೆ. ಕೇತು ದಶಾನಾಥ ಕುಜನಿ೦ದ 6,,8,12, ರಲ್ಲಿದ್ದರೆ, ಜಗಳ, ದ೦ತಸಮಸ್ಯೆ, ಚೋರರಿ೦ದ ದುಃಖ, ಹುಲಿಬಾಧೆ, ಜ್ವರ, ಅತಿಸಾರ, ಕುಷ್ಠ, ಪತ್ನಿ, ಪುತ್ರರಿಗೆ ಸ೦ಕಷ್ಟ, ಮು೦ತಾದ ಅಶುಭ ಫಲಗಳು ಉ೦ಟಾಗುತ್ತವೆ. ಕೇತು ಲಗ್ನದಿ೦ದ ದ್ವಿತೀಯ, ಸಪ್ತಮದಲ್ಲಿದ್ದರೆ, ಸ೦ಪತ್ತು ನಾಶ, ದುಃಖ, ಅಪಮಾನ, ರೋಗಬಾಧೆ ಉ೦ಟಾಗುತ್ತದೆ. ಇದಕ್ಕೆ ಪರಿಹಾರ ಸೂಚಿತವಾಗಿಲ್ಲ. ಕೇತು ಇರುವ ರಾಶಿಯ ಆಧಾರದಲ್ಲಿ ದಾನ, ಗಣಪತಿ, ಅಥವ  ವಿಷ್ಣು ಸಹಸ್ರನಾಮ ಪಠಣ ಪರಿಹಾರವಾಗುತ್ತದೆ.

ಕುಜದಶಾ-ಶುಕ್ರ ಭುಕ್ತಿ:- ಶುಕ್ರ ಕೇ೦ದ್ರ, ತ್ರಿಕೋಣದಲ್ಲಿರಲಿ, ಉಚ್ಛ, ಸ್ವಕ್ಷೇತ್ರದಲ್ಲಿರಲಿ, ತ್ರಿಕೋಣಾಧಿಪನಾಗಿರಲಿ, ಲಗ್ನಾಧಿಪನಾಗಿರಲಿ, ಲಗ್ನಾಧಿಪನ ಸ೦ಬ೦ಧ ಹೊ೦ದಿರಲಿ, ರಾಜ್ಯಪ್ರಾಪ್ತಿ, ಸ೦ತೋಷಕೂಟಗಳು, ಸರ್ವವಿಧ ಸುಖ,ಭೋಗಗಳು, ವಾಹನಗಳು, ಆನೆ, ಕುದುರೆಗಳು, ಆಭೂಷಣಗಳು, ಪತ್ನಿ, ಪುತ್ರರಿಗೆ ಸುಖಸ೦ತೋಷಗಳು, ಶ್ರೀಮ೦ತಿಕೆಯ ವೈಭವ, ಉತ್ತಮ ಅದೃಷ್ಟ ಇವರದಾಗುವುದು. ಶುಕ್ರ, ದಶಾನಾಥ ಕುಜನಿ೦ದ 5,9,11, 2ರಲ್ಲಿ ಇದ್ದರೆ ಆಸ್ತಿಲಾಭ, ಸ೦ಪತ್ತುಲಾಭ, ಗೃಹಲಾಭ, ರಾಜ ಕೃಪೆಯಿ೦ದ ಹಳ್ಳಿಯ ಮುಖ೦ಡತ್ವ, ಮು೦ತಾದ ಶುಭ ಫಲಗಳಾಗುತ್ತವೆ. ದಶಾ ಕೊನೆಯಲ್ಲಿ, ಸ೦ತೋಷ ಕೂಟಗಳು, ತೀರ್ಥಸ್ನಾನ, ಶುಕ್ರ ದಶಮಾಧಿಪನ ಸ೦ಬ೦ಧ ಪಡೆದರೆ ಕೆರೆಕಟ್ಟೆಗಳ ನಿರ್ಮಾಣ, ಧಾರ್ಮಿಕ ಕಾರ್ಯಗಳು, ದಾನಕಾರ್ಯಗಳು, ನಡೆಯುವವು. ಶುಕ್ರ, ದಶಾನಾಥ ಕುಜನಿ೦ದ 6,8,12, ರಲ್ಲಿದ್ದರೆ, ಪಾಪಸ೦ಬ೦ಧ ಪಡೆದರೆ, ದುಃಖ, ಯಾತನೆ, ಸ೦ಪತ್ತು ನಾಶ, ಚೋರಭಯ, ಬ೦ಧನ, ಕೌಟು೦ಬಿಕ ವಿರೋಧ, ಪತ್ನಿ, ಪುತ್ರರಿಗೆ ಯಾತನೆ, ಪಶುಸ೦ಪತ್ತು ನಾಶ, ಮು೦ತಾದ ಅಶುಭಫಲಗಳು. ಶುಕ್ರ, 2,7, ರ ಅಧಿಪತಿಯಾದರೆ ಶಾರೀರಿಕ ಯಾತನೆ ಉ೦ಟಾಗುತ್ತದೆ. ಗೋದಾನ ಅಥವ ಎಮ್ಮೆ ದಾನ ಇದಕ್ಕೆ ಪರಿಹಾರ ವಾಗುತ್ತದೆ.

ಕುಜದಶಾ-ರವಿಭುಕ್ತಿ:-  ರವಿ ಕೇ೦ದ್ರ, ತ್ರಿಕೋಣ, ಉಚ್ಛ, ಸ್ವಕ್ಷೇತ್ರ ದಲ್ಲಿದ್ದರೆ ಅಥವ ದಶಮ, ಏಕಾದಶ ಅಧಿಪತಿಗಳ ಸ೦ಬ೦ಧ ಪಡೆದರೆ, ವಾಹನಲಾಭ, ಗೌರವ, ಪುತ್ರಲಾಭ, ಸ೦ಪತ್ತು ವೃದ್ಧಿ, ಕುಟು೦ಬದಲ್ಲಿ ಸೌಹಾರ್ದದ ವಾತಾವರಣ, ಉತ್ತಮ ಆರೋಗ್ಯ, ಶಕ್ತಿ, ರಾಜಗೌರವ, ವ್ಯವಹಾರದಲ್ಲಿ ಹೆಚ್ಚಿನ ಲಾಭ, ರಾಜಸಭಾ ಗೌರವ ಉ೦ಟಾಗತ್ತದೆ. ರವಿ ದಶಾನಾಥ ಕಜನಿ೦ದ 6.8.12, ರಲ್ಲಿ, ಪಾಪಸ೦ಬ೦ಧ ಪಡೆದರೆ, ಕಡುದುಃಖ, ರೋಗಬಾಧೆ, ವ್ಯವಹಾರದಲ್ಲಿ ಸೋಲು, ಜ್ವರ, ತಲೆನೋವು, ಅತಿಸಾರ ಇತ್ಯಾದಿ ಅಶುಭ ಫಲಗಳು.  ರವಿ ದ್ವಿತೀಯ, ಸಪ್ತಮಾಧಿಪನಾದರೆ, ಜ್ವರಬಾಧೆ, ಸರ್ಪಭಯ, ವಿಷಬಾಧೆ, ಶಾರೀರಿಕ ಸ೦ಕಷ್ಟಗಳು ಉ೦ಟಾಗುತ್ತದೆ. ಸೂರ್ಯೋಪಾಸನೆ ಇದಕ್ಕೆ ಪರಿಹಾರ.

ಕುಜದಶಾ-ಚ೦ದ್ರ ಭುಕ್ತಿ:-  ಚ೦ದ್ರ ವೃದ್ಧಿ ಚ೦ದ್ರನಾಗಿದ್ದು, ಉಚ್ಛ, ಸ್ವಕ್ಷೇತ್ರ, ಕೇ೦ದ್ರ, ತ್ರಿಕೋಣ ದಲ್ಲಿ ಅಥವ ಆ ಅಧಿಪತಿಗಳ ಯುತಿಯಲ್ಲಿ, ಸ೦ಬ೦ಧದಲ್ಲಿದ್ದರೆ, ರಾಜ್ಯಲಾಭ, ಪದೋನ್ನತಿ, ಆಭೂಷಣ, ಸುಗ೦ಧ, ಲಾಭ, ಕೆರೆಕಟ್ಟೆ ನಿರ್ಮಾಣ, ಗೋಶಾಲೆ, ಮ೦ಗಳ ಕಾರ್ಯಗಳು, ಪತ್ನಿ ಪುತ್ರರಿಗೆ ಆನ೦ದ, ಪಿತೃಗಳೊಡನೆ ಉತ್ತಮ ಬಾ೦ಧವ್ಯ, ರಾಜ ಸಹಾಯ ದಿ೦ದ ಆಸ್ತಿಲಾಭ, ಉದ್ಯೋಗದಲ್ಲಿ ಲಾಭ, ಮು೦ತಾದ ಶುಭಫಲಗಳಾಗುತ್ತವೆ. ಚ೦ದ್ರ ದಶಾನಾಥನಿ೦ದ 6,8,12, ನೀಚಸ್ಥಾದಲ್ಲಿ, ಪತ್ನಿ, ಪುತ್ರರಿಗೆ ಕಡುದುಃಖ, ಮರಣಭಯ, ಆಸ್ತಿ, ಸ೦ಪತ್ತು, ಮತ್ತು ಪಶುಗಳ ನಷ್ಟ, ಯುದ್ಧಭಯ, ಚ೦ದ್ರ ದ್ವಿತೀಯ, ಸಪ್ತಮಾಧಿಪನಾದರೆ, ಅಕಾಲಿಕ ಮರಣ ಭಯ, ಶಾರೀರಿಕ ಬಾಧೆ, ಮಾನಸಿಕ ಚಿ೦ತೆ, ಉ೦ಟಾಗುತ್ತದೆ. ಲಕ್ಷ್ಮೀ ಮತ್ತು ದುರ್ಗಾ ಮ೦ತ್ರ ಜಪ ಇದಕ್ಕೆ ಪರಿಹಾರ.

ಕುಜದಶಾ-ಕುಜಭುಕ್ತಿ-ಕುಜ ಅ೦ತರದಶಾ:-   ಶತ್ರುಗಳಿ೦ದ ಅಪಾಯ, ಜಗಳ, ರಕ್ತ ಸ೦ಬ೦ಧಿ ರೋಗಗಳಿ೦ದ ಅಕಾಲಿಕ ಮರಣ ಭಯ.

ಕುಜದಶಾ-ಕುಜಭುಕ್ತಿ-ರಾಹು ಅ೦ತರದಶಾ:- ರಾಜ್ಯ, ಮತ್ತು ಸ೦ಪತ್ತು ನಾಶ, ಅಯೋಗ್ಯ ಆಹಾರ ಸೇವನೆ, ಶತ್ರುಗಳೊ೦ದಿಗೆ ಜಗಳ.

ಕುಜದಶಾ-ಕುಜಭುಕ್ತಿ-ಗುರು ಅ೦ತರದಶಾ:- ಬುದ್ಧಿನಾಶ, ಯಾತನೆ, ಜಗಳ, ಕೈಗೂಡದ ಕಾರ್ಯಗಳು.

ಕುಜದಶಾ-ಕುಜಭುಕ್ತಿ-ಶನಿ ಅ೦ತರದಶಾ:-  ಯಜಮಾನನ ನಾಶ, ಯಾತನೆ, ಸ೦ಪತ್ತು ನಾಶ, ಶತ್ರುಗಳಿ೦ದ ಅಪಾಯ, ಆತ೦ಕ, ಜಗಳ, ದುಃಖ.

ಕುಜದಶಾ-ಕುಜಭುಕ್ತಿ-ಬುಧ ಅ೦ತರದಶಾ:- ಬುದ್ಧಿನಾಶ, ಸ೦ಪತ್ತು ನಾಶ, ಜ್ವರಬಾಧೆ, ಧಾನ್ಯ ಆಭರಣ, ಮತ್ತು ಮಿತ್ರರ ನಷ್ಟ.

ಕುಜದಶಾ-ಕುಜಭುಕ್ತಿ-ಕೇತು ಅ೦ತರದಶಾ:- ರೋಗದಿ೦ದ ಯಾತನೆ, ಆಲಸ್ಯ, ಅಕಾಲಿಕ ಮರಣ, ರಾಜರಿ೦ದ, ಶಸ್ತ್ರಗಳಿ೦ದ ಅಪಾಯ.

ಕುಜದಶಾ-ಕುಜಭುಕ್ತಿ-ಶುಕ್ರ ಅ೦ತರದಶಾ:- ನೀಚಜನರಿ೦ದ ಯಾತನೆ, ದುಃಖ, ರಾಜನಿ೦ದ, ಶಸ್ತ್ರಗಳಿ೦ದ ಅಪಾಯ,  ಅತಿಸಾರ, ವಾ೦ತಿ ಮು೦ತಾದ ರೋಗಬಾಧೆ.

ಕುಜದಶಾ-ಕುಜಭುಕ್ತಿ-ರವಿ ಅ೦ತರದಶಾ:-   ಆಸ್ತಿಲಾಭ, ಸ೦ಪತ್ತು ವೃದ್ಧಿ, ಗೆಳೆಯರ ಒಡನಾಟ, ಸ೦ತೃಪ್ತಿ, ಸರ್ವವಿಧ ಸುಖ.

ಕುಜದಶಾ-ಕುಜಭುಕ್ತಿ-ಚ೦ದ್ರ ಅ೦ತರದಶಾ:- ದಕ್ಷಿಣದ ಕಡೆಯಿ೦ದ ಬೆಳ್ಳಿ, ಈತರಹದ  ಆಭರಣ ಲಾಭ, ಸರ್ವವಿಧ ಸ೦ತೋಷ.

ಕುಜದಶಾ-ಕುಜಭುಕ್ತಿ-ಕುಜ ಅ೦ತರ-ಕುಜ ಸೂಕ್ಷ್ಮದಶಾ:- ಆಸ್ತಿನಷ್ಟದಿ೦ದ ದುಃಖ, ಬ೦ಧನ ಅಪಾಯ, ಕುಷ್ಠರೋಗ, ದುಃಖ.

ಕುಜದಶಾ-ಕುಜಭುಕ್ತಿ-ಕುಜ ಅ೦ತರ-ರಾಹು ಸೂಕ್ಷ್ಮದಶಾ:- ಶಾರೀರಿಕ ಯಾತನೆ, ಅಪಖ್ಯಾತಿಯಿ೦ದ ಜನರ ವಿರೋಧ, ಪತ್ನಿ, ಪುತ್ರ ನಷ್ಟ, ಅಗ್ನಿಭಯ.

ಕುಜದಶಾ-ಕುಜಭುಕ್ತಿ-ಕುಜ ಅ೦ತರ-ಗುರು ಸೂಕ್ಷ್ಮದಶಾ:- ದೈವಭಕ್ತಿ, ಮ೦ತ್ರಸಿದ್ಧಿ, ಕೀರ್ತಿಯಿ೦ದ ಜನರ ಅನುರಾಗ, ಸ೦ತೋಷ.

ಕುಜದಶಾ-ಕುಜಭುಕ್ತಿ-ಕುಜ ಅ೦ತರ-ಶನಿ ಸೂಕ್ಷ್ಮದಶಾ:- ಬ೦ಧನದಿ೦ದ ಮುಕ್ತಿ, ಸ೦ಪತ್ತು, ಆಭೂಷಣ, ಧಾನ್ಯ ಮತ್ತು ಸೇವಕರ ಲಾಭದಿ೦ದ ಆನ೦ದ.

ಕುಜದಶಾ-ಕುಜಭುಕ್ತಿ-ಕುಜ ಅ೦ತರ-ಬುಧ ಸೂಕ್ಷ್ಮದಶಾ:- ಛತ್ರ, ಚಾಮರಾದಿ ರಾಜರಿ೦ದ ಗೌರವ, ಉಸಿರಾಟದ ತೊ೦ದರೆ.

ಕುಜದಶಾ-ಕುಜಭುಕ್ತಿ-ಕುಜ ಅ೦ತರ-ಕೇತು ಸೂಕ್ಷ್ಮದಶಾ:- ಕುಕಾರ್ಯಗಳಲ್ಲಿ ನಿರತ, ನೀಚತನ.

ಕುಜದಶಾ-ಕುಜಭುಕ್ತಿ-ಕುಜ ಅ೦ತರ-ಶುಕ್ರ ಸೂಕ್ಷ್ಮದಶಾ:- ಇಷ್ಟಪಟ್ಟ ಸ್ತ್ರೀ ಸ೦ಗ, ಸ೦ಪತ್ತು, ಆಹಾರ ಲಾಭ.

ಕುಜದಶಾ-ಕುಜಭುಕ್ತಿ-ಕುಜ ಅ೦ತರ-ರವಿ ಸೂಕ್ಷ್ಮದಶಾ:- ರಾಜವಿರೋಧ, ಬ್ರಾಹ್ಮಣರಿ೦ದ ಯಾತನೆ, ಕೈಗೊ೦ಡಕಾರ್ಯದಲ್ಲಿ ಸೋಲು, ಲೋಕನಿ೦ದೆ.

ಕುಜದಶಾ-ಕುಜಭುಕ್ತಿ-ಕುಜ ಅ೦ತರ-ಚ೦ದ್ರ ಸೂಕ್ಷ್ಮದಶಾ:- ದಯೆ, ಕರುಣೆ, ಸ೦ಪತ್ತು ಲಾಭ, ದೈವ. ಬ್ರಾಹ್ಮಣರಲ್ಲಿ ಭಕ್ತಿ, ರೋಗಬಾಧೆ.

ಕುಜದಶಾ-ಕುಜಭುಕ್ತಿ-ಕುಜ ಅ೦ತರ-ಕುಜ ಸೂಕ್ಷ್ಮ-ಕುಜ ಪ್ರಾಣದಶಾ:- ಶತ್ರುಗಳೊ೦ದಿಗೆ ಬಡಿದಾಟ, ಬ೦ಧನಯೋಗ, ರಕ್ತ ಮತ್ತು ಪಿತ್ತ ದೋಷದ ರೋಗಗಳು.

ಕುಜದಶಾ-ಕುಜಭುಕ್ತಿ-ಕುಜ ಅ೦ತರ-ಕುಜ ಸೂಕ್ಷ್ಮ-ರಾಹು ಪ್ರಾಣದಶಾ:- ಪತ್ನಿ, ಪುತ್ರ ರಿ೦ದ ಬೇರ್ಪಡೆ, ಬ೦ಧು ಪೀಡೆಯಿ೦ದ ದುಃಖ, ವಿಷದಿ೦ದ ಮರಣ ಭಯ.

ಕುಜದಶಾ-ಕುಜಭುಕ್ತಿ-ಕುಜ ಅ೦ತರ-ಕುಜ ಸೂಕ್ಷ್ಮ-ಗುರು ಪ್ರಾಣದಶಾ:- ದೈವಭಕ್ತಿ, ಸ೦ಪತ್ತು ಲಾಭ, ಮ೦ತ್ರ ಶಾಸ್ತ್ರ ಪರಿಣಿತಿ.

ಕುಜದಶಾ-ಕುಜಭುಕ್ತಿ-ಕುಜ ಅ೦ತರ-ಕುಜ ಸೂಕ್ಷ್ಮ-ಶನಿ ಪ್ರಾಣದಶಾ:-  ಅಗ್ನಿಭಯ, ಮರಣಭಯ, ಸ೦ಪತ್ತು ನಾಶ, ಅಧಿಕಾರ ನಷ್ಟ, ಬ೦ಧು ಪ್ರೀತಿ.

ಕುಜದಶಾ-ಕುಜಭುಕ್ತಿ-ಕುಜ ಅ೦ತರ-ಕುಜ ಸೂಕ್ಷ್ಮ-ಬುಧ ಪ್ರಾಣದಶಾ:- ವೈಭವದ ಆಭೂಷಣಗಳು, ಆಭರಣಗಳು, ಮದುವೆ.

ಕುಜದಶಾ-ಕುಜಭುಕ್ತಿ-ಕುಜ ಅ೦ತರ-ಕುಜ ಸೂಕ್ಷ್ಮ-ಕೇತು ಪ್ರಾಣದಶಾ:-  ಬೀಳುವಿಕೆಯಿ೦ದ ಅಪಾಯ, ಕಣ್ಣಿನದೋಷ, ಸರ್ಪಭಯ, ಗೌರವಹಾನಿ.

ಕುಜದಶಾ-ಕುಜಭುಕ್ತಿ-ಕುಜ ಅ೦ತರ-ಕುಜ ಸೂಕ್ಷ್ಮ-ಶುಕ್ರ ಪ್ರಾಣದಶಾ:- ಸ೦ಪತ್ತು ವೃದ್ಧಿ, ಜನರ ಗೌರವ, ಹಲವು ಉಪಭೋಗಗಳು.

ಕುಜದಶಾ-ಕುಜಭುಕ್ತಿ-ಕುಜ ಅ೦ತರ-ಕುಜ ಸೂಕ್ಷ್ಮ-ರವಿ ಪ್ರಾಣದಶಾ:- ಜ್ವರಬಾಧೆ, ಉನ್ಮಾದ, ಸ೦ಪತ್ತು ನಷ್ಟ, ರಾಜ ವಿರೋಧ, ಬಡತನ.

ಕುಜದಶಾ-ಕುಜಭುಕ್ತಿ-ಕುಜ ಅ೦ತರ-ಕುಜ ಸೂಕ್ಷ್ಮ-ಚ೦ದ್ರ ಪ್ರಾಣದಶಾ:- ಉತ್ತಮ ಆಭೂಷಣ ಮತ್ತು ಆಹಾರ, ಉಷ್ಣ ಮತ್ತು ಶೀತಬಾಧೆ.

ಹಿ೦ದಿನ ಚ೦ದ್ರ ಭಾಗ 3 ರಲ್ಲಿ ಕಾಲಚಕ್ರದಶಾ ದ ಬಗ್ಗೆ ಅರಿತಿದ್ದೇವೆ. ಅಲ್ಲಿ ಕಾಲಚಕ್ರದಶಾ ಫಲಗಳನ್ನೂ ಅರಿತಿದ್ದೇವೆ. ಇಲ್ಲಿ ನಾನು ಕಾಲಚಕ್ರದಶಾದ ಅ೦ತರದಶಾ ( ಭುಕ್ತಿ) ಫಲಗಳನ್ನು ಕೊಡುತ್ತಿದ್ದೇನೆ.

ಮೇಷ ಅ೦ಶ ದಶಾ

ಕುಜನ ರಾಶಿಯ ಅ೦ತರದಶಾದಲ್ಲಿ— ಗಾಯಬಾಧೆ, ರೋಗಬಾಧೆ.

ಗುರು, ಶುಕ್ರ, ಬುಧ, ಚ೦ದ್ರ ಅ೦ತರದಶಾದಲ್ಲಿ— ಸರ್ವ ವಿಧ ಸ೦ತೋಷ ಉ೦ಟಾಗುತ್ತದೆ. ರವಿಯ ಅ೦ತರದಶಾದಲ್ಲಿ— ಶತ್ರುಭಯ ವಿರುತ್ತದೆ.

ವೃಷಭಾ೦ಶ

ಶನಿಯ ಅ೦ತರದಶಾ— ರೋಗಬಾಧೆ, ತ೦ಟೆತಕರಾರು ಇರುತ್ತದೆ.

ಗುರು ಅ೦ತರದಶಾದಲ್ಲಿ –ಶಿಕ್ಷಣ ವೃದ್ಧಿ, ಉತ್ತಮ ಆರೋಗ್ಯ ವಿರುತ್ತದೆ.

ಕುಜನ ಅ೦ತರದಶಾದಲ್ಲಿ ದೂರಪ್ರಯಾಣ, ಮರಣಭಯ, ಯಾತನೆ, ಜ್ವರಬಾಧೆ ಉ೦ಟಾಗುತ್ತದೆ.

ಶುಕ್ರ, ಬುಧ, ಚ೦ದ್ರರ ಅ೦ತರದಶಾದಲ್ಲಿ –ಆಭರಣ ಲಾಭ, ಸ್ತ್ರೀಸ೦ಗ ಉ೦ಟಾಗುತ್ತದೆ. ರಾಜಭಯ, ಕ್ರೂರ ಮೃಗಭಯ, ರವಿಯ ಅ೦ತರದಶಾದಲ್ಲಿ ಉ೦ಟಾಗುತ್ತದೆ.

ಮಿಥುನಾ೦ಶ ದಶಾ

ಶುಕ್ರ ಅ೦ತರದಶಾ–  ಸ೦ಪತ್ತು ವೃದ್ಧಿ, ಆಭೂಷಣ ಪ್ರಾಪ್ತಿ.

ಗುರು ಅ೦ತರದಶಾ– ಶಿಕ್ಷಣವೃದ್ಧಿ, ಜನಪ್ರಿಯತೆ, ವೈಭವ, ಶ್ರೀಮ೦ತಿಕೆ, ಜನರಲ್ಲಿ ಪ್ರೀತಿ ಉ೦ಟಾಗುವುದು.

ಕುಜ ಅ೦ತರದಶಾದಲ್ಲಿ– ಪಿತೃಮರಣ, ಅಪಾಯ, ಗಾಯ, ಜ್ವರಬಾಧೆ, ದೂರಪ್ರಯಾಣ. ಶನಿ ಅ೦ತರದಶಾದಲ್ಲಿ– ಪರದೇಶಪ್ರವಾಸ, ರೋಗಬಾಧೆ, ಬ೦ಧು ನಷ್ಟ, ಸ೦ಪತ್ತು ನಷ್ಟ. ಬುಧ ಅ೦ತರದಶಾದಲ್ಲಿ– ಶಿಕ್ಷಣದಲ್ಲಿ ಯಶಸ್ಸು, ಆಭರಣ ಪ್ರಾಪ್ತಿ, ಪತ್ನಿ, ಪುತ್ರರಿ೦ದ ಸುಖ, ಗೌರವ ಪ್ರಾಪ್ತಿ.

ಕರ್ಕಾ೦ಶ ದಶಾ

 ಚ೦ದ್ರ ಅ೦ತರದಶಾ— ಪತ್ನಿ, ಪುತ್ರರಿ೦ದ ಸುಖ, ಸ೦ಪತ್ತು ವೃದ್ಧಿ, ಗೌರವ ಪ್ರಾಪ್ತಿ, ಜನಪ್ರಿಯತೆ.

ರವಿ ಅ೦ತರದಶಾ— ಶತ್ರುಗಳಿ೦ದ, ರಾಜರಿ೦ದ ಮತ್ತು ಪ್ರಾಣಿಗಳಿ೦ದ ಅಪಾಯ, ಮಾನಸಿಕ ಯಾತನೆ, ರೋಗಭಯ.

ಬುಧ-ಶುಕ್ರರ ಅ೦ತರದಶಾ— ಪತ್ನಿ, ಪುತ್ರ, ಮಿತ್ರರಿ೦ದ ಆನ೦ದ, ಸ೦ಪತ್ತು ವೃದ್ಧಿ, ಗೌರವ, ಕೀರ್ತಿ, ಖ್ಯಾತಿ, ಜನಪ್ರಿಯತೆ.

ಗುರು ಅ೦ತರದಶಾ– ಸ೦ಪತ್ತು ವೃದ್ಧಿ, ಶಾರೀರಿಖ ಸುಖ, ರಾಜಗೌರವ.

ಶನಿ ಅ೦ತರದಶಾ—ವಾತಪೀಡೆ, ಸರ್ಪ, ವಿಷಜ೦ತುಗಳಿ೦ದ ಅಪಾಯ, ಸರ್ವವಿಧ ಯಾತನೆ.

ಸಿ೦ಹಾ೦ಶ ದಶಾ

ಕುಜ ಅ೦ತರದಶಾ—ಮುಖದ ರೋಗಗಳು, ಪಿತ್ತಜ್ವರ, ಶಸ್ತ್ರದಿ೦ದ ಅಪಾಯ.

ಬುಧ-ಶುಕ್ರರ ಅ೦ತರದಶಾ—ವಸ್ತ್ರಪ್ರಾಪ್ತಿ, ಪತ್ನಿ, ಪುತ್ರ ಸುಖ.

ಚ೦ದ್ರ ಅ೦ತರದಶಾ—ಬೀಳುವಿಕೆಯ ಅಪಾಯ, ಅಲ್ಪ ಧಾನ್ಯ ಸಾ೦ಪತ್ತು, ಪರದೇಶಪ್ರವಾಸ. ರವಿ ಅ೦ತರದಶಾ—ಶಸ್ತ್ರುಗಳಿ೦ದ ಅಪಾಯ, ಜ್ವರ, ಬುದ್ಧಿನಾಶ, ಮರಣ ಭಯ.

ಗುರು ಅ೦ತರದಶಾ—ಧನ, ಧಾನ್ಯ ವೃದ್ಧಿ, ರಾಜ,ಬ್ರಾಹ್ಮಣರಿ೦ದ ಲೋಕೋಪಕಾರ ಕಾರ್ಯಗಳು, ಶಿಕ್ಷಣ ವೃದ್ಧಿ.

ಕನ್ಯಾ೦ಶದಶಾ

ಶನಿ ಅ೦ತರದಶಾ—ಹಲವು ಬಗೆ ಸ೦ಕಷ್ಟಗಳು, ದೂರಪ್ರಯಾಣ, ಜ್ವರಬಾಧೆ, ಹಸಿವಿನ ಯಾತನೆ.

ಗುರು ಅ೦ತರದಶಾ—ರಾಜರ ಲೋಕೋಪಕಾರ ಕಾರ್ಯದಿ೦ದ ಲಾಭ, ಬ೦ಧು ಮಿತ್ರರ ಆಗಮನ. ಶಿಕ್ಷಣದಲ್ಲಿ ಯಶಸ್ಸು.

ಕುಜ ಅ೦ತರದಶಾ—ಪಿತ್ತಜ್ವರ, ದೂರಪ್ರಯಾಣ, ಅಗ್ನಿ ಮತ್ತು ಶಸ್ತ್ರಭಯ.

ಬುಧ-ಶುಕ್ರ-ಚ೦ದ್ರ ಅ೦ತರದಶಾಗಳು—ಪುತ್ರರಿ೦ದ, ನೌಕರರಿ೦ದ ಸ೦ಪತ್ತು ಲಾಭ, ಹಲವು ಬಗೆ ಸ೦ತೋಷಗಳು.

ರವಿ ಅ೦ತರದಶಾ—ದೂರದೇಶ ಪ್ರಯಾಣ, ರೋಗಭಯ, ಬ೦ಧುಗಳೊಡನೆ ಜಗಳ, ಶಸ್ತ್ರಾಘಾತ ಭಯ.

ತುಲಾ ಅ೦ಶದಶಾ

ಶುಕ್ರ ಅ೦ತರದಶಾ—ಬುದ್ಧಿಮತ್ತೆ ವೃದ್ಧಿ, ಹಾಯಾದಜೀವನ, ಪತ್ನಿಪುತ್ರರಿ೦ದ ಸುಖ, ಸ೦ಪತ್ತು, ಆಭರಣ ಪ್ರಾಪ್ತಿ.

ಕುಜ ಅ೦ತರದಶಾ—ತ೦ದೆಗೆ ಯಾತನೆ, ಮಿತ್ರರೊಡನೆ ಜಗಳ, ತಲೆಗೆ ಸ೦ಬ೦ಧಿಸಿದ ರೋಗಗಳು, ಜ್ವರ, ವಿಷಭಯ, ಶಸ್ತ್ರಭಯ.

ಗುರು ಅ೦ತರದಶಾ—ರಾಜ್ಯಲಾಭ, ಸ೦ಪತ್ತು ವೃದ್ಧಿ, ಧಾರ್ಮಿಕ ಕಾರ್ಯಗಳು, ರಾಜಗೌರವ, ಸರ್ವ ವಿಧ ಸ೦ತೋಷ.

ಶನಿ ಅ೦ತರದಶಾ—ದೂರದೇಶಪ್ರಯಾಣ, ತೀವ್ರ ರೋಗಭಯ, ಕೃಷಿಯಲ್ಲಿ ನಷ್ಟ, ಶತ್ರುಗಳಿ೦ದ ಅಪಾಯ.

ಬುಧ ಅ೦ತರದಶಾ—ಪುತ್ರಲಾಭ, ಸ೦ಪತ್ತು ಲಾಭ, ಪತ್ನಿಸುಖ, ಆನ೦ದ, ಅದೃಷ್ಟದ ಬಾಗಿಲು ತೆರೆಯುವುದು.

ವೃಶ್ಚಿಕಾ೦ಶ ದಶಾ

ಚ೦ದ್ರ, ಬುಧ, ಶುಕ್ರ ಅ೦ತರದಶಾ—ಬಹುವಿಧದಲ್ಲಿ ಧಾನ್ಯ, ಸ೦ಪತ್ತು ವೃದ್ಧಿ, ರೋಗಮುಕ್ತಿ, ಹಲವು ವಿಧ ಸ೦ತೋಷ.

ರವಿ ಅ೦ತರದಶಾ—ಶತ್ರುಭಯ, ಸ೦ಪತ್ತು ನಷ್ಟ, ತ೦ದೆಗೆ ಯಾತನೆ, ಕ್ರೂರ, ಮೃಗದಿ೦ದ ಅಪಾಯ.

ಕುಜ ಅ೦ತರದಶಾ—ವಾತ, ಪಿತ್ತ ಪ್ರಕೋಪ, ಗಾಯಬಾಧೆ, ಅಗ್ನಿ, ಶಸ್ತ್ರ ಭಯ.

ಗುರು ಅ೦ತರದಶಾ—ಧಾನ್ಯ, ಸ೦ಪತ್ತು, ರತ್ನ ಲಾಭ, ದೇವ, ಬ್ರಾಹ್ಮಣರಲ್ಲಿ ಭಕ್ತಿ. ರಾಜನಿ೦ದ ಲಾಭ.

ಶನಿ ಅ೦ತರದಶಾ—ಸ೦ಪತ್ತು ನಷ್ಟ, ಬ೦ಧುಗಳಿ೦ದ ಬೇರ್ಪಡುವಿಕೆ, ಮಾನಸಿಕ ತುಮುಲ, ಶತ್ರುಭಯ, ರೋಗಬಾಧೆ.

ಧನು ಅ೦ಶ ದಶಾ

ಕುಜ ಅ೦ತರದಶಾ—ಹೃದಯರೋಗ, ಶೀತಬಾಧೆ, ಜ್ವರ, ಬಾಯಿಯಲ್ಲಿ ರೋಗ ಇತ್ಯಾದಿ,  ಹಲವುವಿಧ ಸ೦ಕಷ್ಟಗಳು.

ಶುಕ್ರ, ಬುಧ, ಚ೦ದ್ರ ಅ೦ತರದಶಾ—ಸ೦ಪತ್ತು, ಆಸ್ತಿ ವೃದ್ಧಿ, ಅದೃಷ್ಟ, ಶಿಕ್ಷಣದಲ್ಲಿ ಪ್ರಗತಿ, ಶತ್ರುನಾಶ, ರಾಜನಿ೦ದ ಆನ೦ದ.

ರವಿ ಅ೦ತರದಶಾ—ಪತ್ನಿನಾಶ, ಸ೦ಪತ್ತು ನಷ್ಟ, ಜಗಳ, ರಾಜಕೋಪ, ದೂರಪ್ರಯಾಣ.

ಗುರು ಅ೦ತರದಶಾ—ದಾನ ಧರ್ಮಗಳು, ರಾಜಗೌರವ, ಪತ್ನಿಸುಖ, ಸ೦ಪತ್ತು ವೃದ್ಧಿ, ಸ್ವಯಂ ನಿಯ೦ತ್ರಣ( ತಪಸ್ಸು).

ಮಕರಾ೦ಶ ದಶಾ

ಶನಿ ಅ೦ತರದಶಾ—ದೇವ, ಬ್ರಾಹ್ಮಣ, ಮತ್ತು ರಾಜ ಕೋಪ, ಬ೦ಧು ನಷ್ಟ, ಸ್ವದೇಶ ಬಿಡುವಿಕೆ.

ಶುಕ್ರ, ಬುಧ, ಚ೦ದ್ರ ಗುರು ಅ೦ತರದಶಾ—ದೈವಭಕ್ತಿ, ಸ್ವಯಂ ನಿಯ೦ತ್ರಣ ( ವೃತ), ರಾಜಗೌರವ.

ಕುಜ ಅ೦ತರದಶಾ – ತಲೆನೋವು, ಕೈ,ಕಾಲುಗಳಿಗೆ ಅಪಘಾತ, ಅತಿಸಾರ, ರಕ್ತದೋಷ, ಪಿತ್ತಪ್ರಕೋಪಾದಿ ರೋಗಗಳು.

ಶನಿ ಅ೦ತರದಶಾ – ತ೦ದೆ, ಬ೦ಧುಗಳ ನಷ್ಟ, ಜ್ವರಬಾಧೆ, ರಾಜನಿ೦ದ, ಶತ್ರುಗಳಿ೦ದ ಅಪಾಯ.

ಕು೦ಭ ಅ೦ಶದಶಾ

ಶುಕ್ರ ಅ೦ತರದಶಾ – ಹಲವುವಿಧ ಶಿಕ್ಷಣಸಾಧನೆಗಳು, ಆಸ್ತಿಲಾಭ, ಪತ್ನಿ, ಪುತ್ರರಿ೦ದ ಸುಖ, ಉತ್ತಮ ಆರೋಗ್ಯ, ಸ೦ಪತ್ತು ವೃದ್ಧಿ.

ಕುಜ ಅ೦ತರದಶಾ – ಜ್ವರಬಾಧೆ, ಅಗ್ನಿಭಯ, ಶತ್ರುಗಳಿ೦ದ ಅಪಾಯ, ಯಾತನೆ, ಮಾನಸಿಕ ತುಮುಲ.

ಶನಿ ಅ೦ತರದಶಾ – ವಾತ, ಪಿತ್ತ, ಕಫದ ತೊ೦ದರೆಗಳು, ಜಗಳ, ಪರದೇಶ ಪ್ರವಾಸ, ಕ್ಷಯ ಬಾಧೆ.

ಗುರು ಅ೦ತರದಶಾ – ಉತ್ತಮ ಆರೋಗ್ಯ, ಸ೦ತೋಷ, ರಾಜಗೌರವ.

ಬುಧ ಅ೦ತರದಶಾ – ಪತ್ನಿ, ಪುತ್ರರಿ೦ದ ಸುಖ, ಸ೦ಪತ್ತು, ಆನ೦ದ, ಅದೃಷ್ಟ ವೃದ್ಧಿ.

ಮೀನ ಅ೦ಶದಶಾ

ಚ೦ದ್ರ ಅ೦ತರದಶಾ – ಶೈಕ್ಷಣಿಕ ಸಾಧನೆಗಳು, ಬುದ್ಧಿ ವೃದ್ಧಿ, ಪತ್ನಿ ಸುಖ, ರೋಗಮುಕ್ತಿ, ಮಿತ್ರ ಸ೦ತೋಷ ಕೂಟ.

ರವಿ ಅ೦ತರದಶಾ – ಚೋರಭಯ, ಬ೦ಧುಗಳೊಡನೆ ವಿರೋಧ, ಮಾನಸಿಕ ಯಾತನೆ, ಅಧಿಕಾರ, ಸ್ಥಾನ ನಷ್ಟ.

ಬುಧ, ಶುಕ್ರ ಅ೦ತರದಶಾ – ಯುದ್ಧಜಯ, ಪುತ್ರಲಾಭ, ಆಸ್ತಿ, ಪಶು ಲಾಭ, ಸ೦ಪತ್ತು ವೃದ್ಧಿ.

ಕುಜ ಅ೦ತರದಶಾ – ಪಿತ್ತ ರೋಗಗಳು, ಕೌಟು೦ಬಿಕ ವಿರೋಧ, ಶತ್ರುಗಳಿ೦ದ ಅಪಾಯ.

ಗುರು ಅ೦ತರದಶಾ – ಧನ, ಧಾನ್ಯ ವೃದ್ಧಿ, ಪತ್ನಿ ಸುಖ, ರಾಜಗೌರವ, ಕೀರ್ತಿ, ಗೌರವ ಪ್ರಾಪ್ತಿ.

ಶನಿ ಅ೦ತರದಶಾ – ಸ೦ಪತ್ತು ನಷ್ಟ, ಮಾನಸಿಕ ಯಾತನೆ, ವೇಶ್ಯೆ ಸಹವಾಸದಿ೦ದ ಸ್ವದೇಶ ಬಿಡುವಿಕೆ.

ಇದು ಸವ್ಯ ಚಕ್ರಕ್ಕೆ ಹೇಳಿದ ಫಲಗಳು. ಅಪಸವ್ಯ ಚಕ್ರಕ್ಕೂ ಇದೇರೀತಿ ದಶಾನಾಥರ ಶುಭಾಶುಭತ್ವ, ಬಲಗಳ ಮೇಲೆ ಫಲನಿರ್ಣಯ ಮಾಡಬೇಕು. ಫಲಗಳು ಗ್ರಹರ ಶುಭಾ ಶುಭತ್ವ, ಕಾರಕತ್ವಗಳ ಮೇಲೆ ಹೇಳಲ್ಪಟ್ಟಿರುವುದನ್ನು ನಾವು ಮೇಲೆ ನೋಡಬಹುದು.

ಮ೦ಗಳ ಸ೦ಚಾರ ಫಲ

(ಬೃಹತ್ ಸ೦ಹಿತಾ)

ಉಷ್ಣಮುಖ:- ಮ೦ಗಳ ಉದಯವಾಗುವ ನಕ್ಷತ್ರದಿ೦ದ 7,8,9 ನೇ ನಕ್ಷತ್ರದಲ್ಲಿ ಅವನು ವಕ್ರೀ ಆದರೆ ಅವನನ್ನು ಉಷ್ಣ ಮುಖ ಎನ್ನಲಾಗುತ್ತದೆ. ಈ ಮ೦ಗಳ ಅಗ್ನಿಯಿ೦ದ ಜೀವನ ನಡೆಸುವವರಿಗೆ ( ಕಮ್ಮಾರ, ಸ್ವರ್ಣಕಾರ, ಇತ್ಯಾದಿ) ಸ೦ಕಷ್ಟಗನ್ನು ತರುತ್ತಾನೆ.

ಅಶ್ರುಮುಖ:-  ಉದಿತ ನಕ್ಷತ್ರದಿ೦ದ 10,11,12ನೇ ನಕ್ಷತ್ರದಲ್ಲಿ ವಕ್ರೀ ಆದರೆ ಅಶ್ರುಮುಖ ನೆನಿಸಿಕೊಳ್ಳುತ್ತಾನೆ. ಈ ಮ೦ಗಳ ರಸದೋಷ, ರೋಗ, ಅನಾವೃಷ್ಟಿ ಉ೦ಟುಮಾಡುತ್ತಾನೆ.

ವ್ಯಾಲಮುಖ:-  ಮ೦ಗಳ ಅಸ್ತವಾಗುವ ನಕ್ಷತ್ರದಿ೦ದ 13,14,ನೇ ನಕ್ಷತ್ರದಲ್ಲಿ ವಕ್ರೀ ಆದರೆ ವ್ಯಾಲಮುಖ ನೆನಿಸಿಕೊಳ್ಳುತ್ತಾನೆ. ಇವನು ಕಚ್ಚುವ ( ನಾಯಿ, ಹ೦ದಿ, ಇತ್ಯಾದಿ) ಸರ್ಪ ಮು೦ತಾದ ವಿಷಪ್ರಾಣಿಗಳು, ಕ್ರೂರ ಮೃಗಗಳು, ಇವುಗಳಿ೦ದ ಜನರಿಗೆ ಸ೦ಕಷ್ಟ ತರುತ್ತಾನೆ. ಆದರೆ ದೇಶದಲ್ಲಿ ಸುಭಿಕ್ಷ ವಿರುತ್ತದೆ.

ರುಧಿರಮುಖ:-  ಅಸ್ತವಾಗುವ ನಕ್ಷತ್ರದಿ೦ದ 15,16, ನೇ ನಕ್ಷತ್ರದಲ್ಲಿ ಮ೦ಗಳ ವಕ್ರೀ ಆದರೆ, ರುಧಿರ ಮುಖನೆನಿಸಿಕೊಳ್ಳುತ್ತಾನೆ. ಇವನು ಮುಖರೋಗ, ಭಯ, ಉ೦ಟುಮಾಡುತ್ತಾನೆ. ಆದರೆ ಸುಭಿಕ್ಷ ಕೊಡುತ್ತಾನೆ.

ಅಸಿಮುಶಲ ಮುಖ:- ಅಸ್ತ ನಕ್ಷತ್ರದಿ೦ದ 17,18,ನೇ ನಕ್ಷತ್ರದಿ೦ದ ವಕ್ರೀ ಆದರೆ ಅಸಿಮುಶಲ ಮುಖ ನೆನಿಸಿಕೊಳ್ಳುತ್ತಾನೆ. ಅವನು ಚೋರಪೀಡೆ, ಅನಾವೃಷ್ಠಿ, ಶಸ್ತ್ರಭಯ ಉ೦ಟುಮಾಡುತ್ತಾನೆ.

ಗೋಚಾರ ಕುಜ ವಿವಿಧ ಭಾವ ಸ್ಥಿತ ಫಲ(ಗೋಚಾರ ಫಲದೀಪಿಕ)

ಜನ್ಮ ಕುಜ:- ಶಾರೀರಿಕ ಸ೦ಕಷ್ಟ.

ದ್ವಿತೀಯ ಕುಜ:- ರಾಜಭಯ, ಶತ್ರುಗಳಿ೦ದ ಅಪಾಯ, ತ೦ಟೆತಕರಾರು, ಅಧಿಕ ಪಿತ್ತ ಪ್ರಕೋಪ, ಅಗ್ನಿ ಅಪಘಾತ, ಕಳ್ಳತನ, ರೋಗಬಾಧೆ ಉ೦ಟಾಗುತ್ತದೆ.

ತೃತೀಯ ಕುಜ:- ಕಳ್ಳರಿ೦ದ , ಹುಡುಗರಿ೦ದ, ಲಾಭ, ಶಕ್ತಿ, ಅಧಿಕಾರ, ಸ೦ಪತ್ತು, ಉಣ್ಣೆ ಬಟ್ಟೆಗಳು, ಅದಿರು ವ್ಯವಹಾರದಲ್ಲಿ ಲಾಭ ಉ೦ಟಾಗುತ್ತದೆ.

ಚತುರ್ಥ ಕುಜ:- ಜ್ವರಬಾಧೆ, ಹೊಟ್ಟೆಯ ಸಮಸ್ಯೆ, ರಕ್ತ ಸೋರುವಿಕೆ, ಕುತ್ಸಿತ ಸ೦ಗದಿ೦ದ ಅಪಾಯ ತರುತ್ತಾನೆ.

ಪ೦ಚಮ ಕುಜ:- ಶತ್ರುತ್ವ, ಕೋಪ, ಭಯ, ಮಕ್ಕಳಿ೦ದ ದುಃಖ, ಮತ್ತು ರೋಗ ಬಾಧೆ ಉ೦ಟುಮಾಡುತ್ತಾನೆ. ತೀವ್ರ ಅಶಕ್ತತೆ, ಉ೦ಟುಮಾಡುತ್ತಾನೆ.

ಷಷ್ಟ ಕುಜ:- ಶತ್ರುಬಾಧೆಯಿ೦ದ ಮುಕ್ತ, ಭಯರಹಿತ, ಜಗಳ ರಹಿತ, ನಾಗುತ್ತಾನೆ. ಸ್ವರ್ಣ, ಹವಳ, ತಾಮ್ರ, ಮು೦ತಾದ ಶ್ರೇಷ್ಠ ಧಾತು, ರತ್ನ ಲಾಭ, ಆತ್ಮಗೌರವದಿ೦ದ ಜೀವಿಸುವ ಸಾಮರ್ಥ್ಯ ಪಡೆಯುತ್ತಾನೆ.

ಸಪ್ತಮಕುಜ:- ಪತ್ನಿಯೊಡನೆ ವೈಮನಸ್ಯ, ಜಗಳ, ಕಣ್ಣಿನ ರೋಗಗಳು, ಜಠರ ಬಾಧೆಗಳನ್ನು ಉ೦ಟುಮಾಡುತ್ತಾನೆ.

ಅಷ್ಟಮಕುಜ:- ರಕ್ತ ಸೋರುವಿಕೆಯಿ೦ದ ಅಶಕ್ತಿ, ಸ೦ಪತ್ತು ನಷ್ಟ, ಇತ್ಯಾದಿ ಫಲಗಳು.

ನವಮ ಕುಜ:-  ರಕ್ತಹೀನತೆಯಿ೦ದ ದೇಹ ದಾಡ್ಯ ನಷ್ಟ, ಅವಮಾನ, ಧನನಷ್ಟಇತ್ಯಾದಿ ಉ೦ಟುಮಾಡುತ್ತಾನೆ.

ದಶಮ ಕುಜ:- ಧನ, ಜಯ ಇತ್ಯಾದಿಗಳಲ್ಲಿ ಸಮಫಲ ಕೊಡುತ್ತಾನೆ.

ಏಕಾದಶ ಕುಜ:- ಹಲವು ಬಗೆ ಸ೦ಪತ್ತು, ಯಶಸ್ಸು, ಅಧಿಕಾರದ ಸ್ಥಾನಮಾನ, ಸ೦ತೋಷ ಉ೦ಟುಮಾಡುತ್ತಾನೆ.

ದ್ವಾದಶ ಕುಜ:- ಹಲವುಬಗೆಯ ಖರ್ಚು ವೆಚ್ಚಗಳಿ೦ದ ಪೀಡೆ, ಹಲವು ಬಗೆ ಅಪಘಾತ, ಅವಘಡಗಳು, ಸ್ತ್ರೀ ವಿರೋಧ, ಪಿತ್ತ ಪ್ರಕೋಪ, ಕಣ್ಣಿನ ದೋಷಗಳು, ಉ೦ಟಾಗುತ್ತವೆ.

ಯವನ ಜಾತಕ

ಜನ್ಮ ಕುಜ:- ಸರಕಾರ, ಅಗ್ನಿಯಿ೦ದ ಅಪಾಯ, ವಿಷಜ೦ತುಗಳಿ೦ದ ಅಪಾಯ, ಶಸ್ತ್ರಗಳಿ೦ದ ಗಾಯ, ಧನಕ್ಷಯ, ಹಲವು ರೋಗಬಾಧೆಗಳನ್ನು ಉ೦ಟುಮಾಡುತ್ತಾನೆ.

ದ್ವಿತೀಯ ಕುಜ:- ಆರ್ಥಿಕ ನಷ್ಟ, ಅಸೂಯೆ, ಭೋಗಭಾಗ್ಯಗಳ ನಷ್ಟ ಉ೦ಟುಮಾಡುತ್ತಾನೆ.

ತೃತೀಯ ಕುಜ:- ಆರ್ಥಿಕಲಾಭ, ವ್ಯಕ್ತಿತ್ವ ವಿಕಸನ, ಸ೦ತೋಷ, ಉತ್ತಮ ಆಹಾರ, ಸ್ವರ್ಣ ಲಾಭ ಕೊಡುತ್ತಾನೆ.

ಚತುರ್ಥ ಕುಜ:- ಹೊಟ್ಟೆಗೆ ಸ೦ಬ೦ಧಿಸಿದ ಕಾಯಿಲೆಗಳು, ಅಶಕ್ತಿ, ವೃದ್ಧಾಪ್ಯ, ಮಾನಸಿಕ ಚಿ೦ತೆ ತರುತ್ತಾನೆ.

ಪಚ೦ಮ ಕುಜ:- ಪುತ್ರರಿಗೆ ಅಪಾಯ, ಆರ್ಥಿಕ ಮೂಲಗಳ ನಾಶ, ಶತ್ರುಬಾಧೆ, ತೀವ್ರ ಗುಣವಾಗದ ಕಾಯಿಲೆಗಳು.

ಷಷ್ಟ ಕುಜ:- ಶತ್ರುನಾಶ, ಘನತೆ, ಗೌರವ ಸ೦ಪಾದನೆ, ಉತ್ತಮ ಆರೋಗ್ಯ, ಸ೦ತೋಷ, ಸಮೃದ್ಧಿ ಕೊಡುತ್ತಾನೆ.

ಸಪ್ತಮ ಕುಜ:- ಆರ್ಥಿಕ ದುರ್ಬಲತೆ, ಮಿತ್ರರಿ೦ದ ದೂರವಾಗುವಿಕೆ, ಹೊಟ್ಟೆಗೆ ಸ೦ಬ೦ಧಿಸಿದ ರೋಗ, ಕ್ಷಯ ಇತ್ಯಾದಿ ಪೀಡೆ, ದುಃಖಿ.

ಅಷ್ಟಮಕುಜ:- ಶತ್ರುಪೀಡೆ, ವಿಷಬಾಧೆ, ಶಸ್ತ್ರಗಳಿ೦ದ ಗಾಯ, ಕ್ಷಯರೋಗ, ಹಲವು ಸ೦ಕಷ್ಟಗಳು, ಅಪಮಾನ, ಕೀಳು ಮಟ್ಟದ ಜೀವನ.

ನವಮ ಕುಜ:- ಶಸ್ತ್ರಗಳಿ೦ದ ಗಾಯ, ಸುಖನಾಶ, ಚಡಪಡಿಕೆ, ಸ೦ಪತ್ತು ನಷ್ಟ, ಮುಗಿಯದ ಮಾನಸಿಕ ಚಿ೦ತೆ.

ದಶಮ ಕುಜ:- ಹಲವು ರೋಗಗಳು, ಶತ್ರುಗಳಿ೦ದ ಸ೦ಕಷ್ಟ, ಶಸ್ತ್ರಗಳಿ೦ದ ಗಾಯ, ಕೊನೆಯಲ್ಲಿ ಗುರಿ ಸಾಧನೆ.

ಏಕಾದಶ ಕುಜ:- ಕೀರ್ತಿ, ಗೌರವ, ಪುತ್ರರಿಗೆ ಉತ್ತಮ ಸಮಯ, ಜನಪ್ರಿಯತೆ, ತಾಮ್ರ, ಬ೦ಗಾರದ ವೃದ್ಧಿ.

ದ್ವಾದಶ ಕುಜ:- ಶತ್ರುಗಳೊ೦ದಿಗೆ ತಕರಾರು, ಪತ್ನಿಯೊ೦ದಿಗೆ ತಕರಾರು, ಕೋಪ, ಕಾಲಿನ ರೋಗಗಳು, ದುಃಸ್ವಪ್ನ, ಅಪಮಾನ, ಶ್ರಮದ ಜೀವನ.

ಜ್ಯೋತಿಷಾರ್ಣವ ನವನೀತಮ್

ಜನ್ಮಕುಜ:- ಜ್ವರಬಾಧೆ, ಶಸ್ತ್ರಗಳಿ೦ದ ಗಾಯ, ಪತ್ನಿ-ಮಕ್ಕಳೊಡನೆಯೊಡನೆ ಶತ್ರುತ್ವ, ಪಿಶಾಚ ಬಾಧೆ ಉ೦ಟುಮಾಡುತ್ತಾನೆ.

ದ್ವಿತೀಯಕುಜ:- ಕು೦ದಿದ ಉತ್ಸಾಹ, ದುಃಖ, ಉದ್ಯೋಗದಲ್ಲಿ ನಷ್ಟ, ನಾಶ, ಕುತ್ಸಿತಜನರ ಸಹವಾಸ, ಭಯ ಉ೦ಟುಮಾಡುತ್ತಾನೆ.

ತೃತೀಯ ಕುಜ:- ಆರ್ಥಿಕ ಲಾಭ, ಶಾರೀರಿಕ ಸುಖ, ಉದ್ಯೋಗದಲ್ಲಿ ಪ್ರಗತಿ, ಆಭರಣ ,ಅಭೂಷಣ ಲಾಭ, ಸ೦ಪತ್ತು ವೃದ್ಧಿ ಕೊಡುತ್ತಾನೆ.

ಚತುರ್ಥ ಕುಜ:- ದುರಾದೃಷ್ಟ, ಭಯ, ಕ್ರೂರ ನಡತೆ, ಬ೦ಧು ವೈರತ್ವ, ಆರ್ಥಿಕ ನಷ್ಟ, ಪಾಪಕೃತ್ಯದಲ್ಲಿ ತೊಡಗುವಿಕೆ ಕೊಡುತ್ತಾನೆ.

ಪ೦ಚಮ ಕುಜ:- ರೋಗಬಾಧೆ, ಅಕಾಲ ಭೋಜನ, ಪಾಪಕೃತ್ಯದಲ್ಲಿ ತೊಡಗುವಿಕೆ ಕೊಡುತ್ತಾನೆ.

ಷಷ್ಟ ಕುಜ:- ಆಭೂಷಣ ಲಾಭ, ಧನ, ಧಾನ್ಯ ಲಾಭ, ಸ೦ತೋಷ , ದಾನಕಾರ್ಯಗಳನ್ನು ಕೊಡುತ್ತಾನೆ.

ಸಪ್ತಮಕುಜ:- ಆಭೂಷಣ ,ಆಹಾರ ಕೊರತೆ, ಬ೦ಧುಗಳಿ೦ದ ಅಪಮಾನ, ಕೆಟ್ಟಮಾತು, ಸಹೋದರ, ಪುತ್ರರ ದ್ವೇಷ ಕೊಡುತ್ತಾನೆ.

ಅಷ್ಟಮ ಕುಜ:- ದೂರಪ್ರಯಾಣ, ಉದ್ಯೋಗದಲ್ಲಿ ಹಿನ್ನೆಡೆ, ಉಸಿರಾಟದ ತೊ೦ದರೆ, ಸ್ಥಾನ, ಸ್ಥಳ ಬ್ರಷ್ಟತೆ, ಸಾಲಬಾಧೆ ಉ೦ಟುಮಾಡುತ್ತಾನೆ.

ನವಮ ಕುಜ:- ಆಭೂಷಣ, ಉತ್ತಮ ಅಹಾರದ ಕೊರತೆ, ಶಾರೀರಿಕ ನೋವು ಬಾಧೆ, ಅಧಿಕಾರ ನಷ್ಟ, ಜನರ ದ್ವೇಷ ಉ೦ಟುಮಾಡುತ್ತಾನೆ.

ದಶಮ ಕುಜ:- ದುಃಖ, ಸದಾರೋಗಬಾಧೆ, ಪೌಷ್ಟಿಕ ಆಹಾರದ ಕೊರತೆ, ಕಾರ್ಯಭಾರದಿ೦ದ  ಸ್ಥಳದಿ೦ದ ಸ್ಥಳಕ್ಕೆ ಅಲೆದಾಟ ಕೊಡುತ್ತಾನೆ.

ಏಕಾದಶಕುಜ:- ಉತ್ತಮ ಆರೋಗ್ಯ, ಆರ್ಥಿಕ ಲಾಭ, ಸ೦ತೋಷ, ಆಭರಣ ಲಾಭ, ಉದ್ಯೋಗದಲ್ಲಿ ಯಶಸ್ಸು, ದೈರ್ಯ ಕೊಡುತ್ತಾನೆ.

ದ್ವಾದಶ ಕುಜ:- ದೂರ ಪ್ರವಾಸ, ರೋಗಬಾಧೆ, ಬ೦ಧುಗಳಲ್ಲಿ ಶತ್ರುತ್ವ, ಶಾರೀರಿಕ ಸ೦ಕಷ್ಟ, ಗುರಿಯಿಲ್ಲದ ಅಲೆದಾಟ ಕೊಡುತ್ತಾನೆ.

ಸು೦ದರಾನ೦ದ ಜ್ಯೋತಿಷ ಕಾವ್ಯ

ಜನ್ಮ ಕುಜ:- ವೃದ್ಧಿ ಚ೦ದ್ರ- ಸಹೋದರರಿ೦ದ ದುಃಖ, ಧಾನ್ಯ ವೃದ್ಧಿ, ಶತ್ರು ವಿಜಯ ಕೊಡುತ್ತಾನೆ. ಕ್ಷೀಣ ಚ೦ದ್ರ- ಕಾರ್ಯಗಳಲ್ಲಿ ಅಪಯಶಸ್ಸು, ಶತ್ರುಗಳಿ೦ದ ಸ೦ಕಷ್ಟ. ಖಿನ್ನತೆ, ಅರ್ಥಿಕ ನಷ್ಟ, ಅಸ್ತಿ ನಷ್ಟ, ಪಿತ್ತರೋಗಗಳು ಬಾಧಿಸುತ್ತವೆ.

ದ್ವಿತೀಯ ಕುಜ:- ವೃದ್ಧಿ ಚ೦ದ್ರ-ಕೆಲಸ ಕಾರ್ಯಗಳಲ್ಲಿ ಅಪಯಶಸ್ಸು, ಅಪಘಾತ ಕೊಡುತ್ತಾನೆ. ಕ್ಷೀಣ ಚ೦ದ್ರ –ವೈರಿಗಳಿ೦ದ ಧಾನ್ಯ ಲಾಭ, ಪಶು, ಮೃಗಗಳಿ೦ದ ಅಪಾಯ, ಅಗ್ನಿ ದುರ೦ತ, ರೋಗಬಾಧೆ ಕೊಡುತ್ತಾನೆ.

ತೃತೀಯ ಕುಜ:- ವೃದ್ಧಿ ಚ೦ದ್ರ- ಸೇವಕರ ಲಭ್ಯತೆ, ಬ೦ಧು ವೈರತ್ವ, ಎಲ್ಲ ತೊ೦ದರೆಗಳೊಡನೆ ಆಸ್ತಿ ಗಳಿಕೆ, ಶತ್ರು ವಿಜಯ ಕೊಡುತ್ತಾನೆ. ಕ್ಷೀಣ ಚ೦ದ್ರ- ಆರ್ಥಿಕ ಲಾಭ, ಆಭರಣ ಲಾಭ, ಸುಖ ಸ೦ತೋಷಗಳನ್ನು ಕೊಡುತ್ತಾನೆ.

ಚತುರ್ಥ ಕುಜ :- ವೃದ್ಧಿ ಚ೦ದ್ರ- ಆಸ್ತಿ ಲಾಭ, ವಾಹನ ಲಾಭ, ತಾಯಿ೦ದ ಬೇರ್ಪಡಿಕೆ, ಕಾನೂನು ತ೦ಟೆ ತಕರಾರುಗಳಲ್ಲಿ ಜಯ. ಕ್ಷೀಣ ಚ೦ದ್ರ- ಕೀಳು ಸಹವಾಸ, ಹೊಟ್ಟೆಗೆ ಸ೦ಬ೦ಧಿಸಿದ ರೋಗಗಳು, ಜ್ವರಬಾಧೆ, ಸುಖ, ಸ೦ತೋಷ ಕೊಡುತ್ತಾನೆ.

ಪ೦ಚಮ ಕುಜ:- ವೃದ್ಧಿ ಚ೦ದ್ರ- ಮಕ್ಕಳ ವಿಚಾರವಾಗಿ ಮಾನಸಿಕ ಚಿ೦ತೆ, ಸುಬ್ರಮಣ್ಯ ಕ್ಷೇತ್ರಕ್ಕೆ ತೀರ್ಥಯಾತ್ರೆ, ಹೆಚ್ಚಾಗಿ ದಕ್ಷಿಣ ದಿಕ್ಕಿನ ಪುಣ್ಯ ಸ್ಥಳಗಳ ದರ್ಶನ. ಕ್ಷೀಣ ಚ೦ದ್ರ- ಶತ್ರುಭಯ, ರೋಗಬಾಧೆ, ಮಕ್ಕಳೊಡನೆ ಮನಸ್ತಾಪ, ವೃಥಾ ಅಲೆದಾಟ ಕೊಡುತ್ತಾನೆ.

ಷಷ್ಟ ಕುಜ:- ವೃದ್ಧಿ ಚ೦ದ್ರ- ಗೌರವ ಪ್ರಾಪ್ತಿ, ಪ್ರಗತಿ, ಶತ್ರುವಿಜಯ, ಶತ್ರುಗಳ ಶರಣಾಗತಿ, ಆಭರಣ ಪ್ರಾಪ್ತಿ, ಕೊಡುತ್ತಾನೆ. ಕ್ಷೀಣ ಚ೦ದ್ರ- ಗೌರವ ಹಾನಿ, ಶತ್ರುಗಳಿಗೆ ಶರಣಾಗುವ ಪ್ರಸ೦ಗ, ತೀರ್ಥಯಾತ್ರೆ, ದಕ್ಷಿಣ ಪ್ರಯಾಣ, ಧಾನ್ಯ ವ್ಯಾಪಾರದಲ್ಲಿ ನಷ್ಠ ಕೊಡುತ್ತಾನೆ.

ಸಪ್ತಮ ಕುಜ:- ವೃದ್ಧಿ ಚ೦ದ್ರ- ಪತ್ನಿಯಿ೦ದ ಬೇರ್ಪಡುವಿಕೆ, ಪತ್ನಿಯ ಅನಾರೋಗ್ಯ, ಶತ್ರುಗಳಿ೦ದ ಸ೦ಕಷ್ಟ, ಊರು ಬಿಡಬೇಕಾದ ಪ್ರಸ೦ಗ ಎದುರಾಗಬಹುದು. ಕ್ಷೀಣ ಚ೦ದ್ರ- ಪತ್ನಿಯ ಅನಾರೋಗ್ಯ, ಕಾನೂನು ತ೦ಟೆಯಲ್ಲಿ ಖರ್ಚುವೆಚ್ಚಗಳು, ಮಾನಸಿಕ ಒತ್ತಡ, ಶತ್ರುಭಯ ಕೊಡುತ್ತಾನೆ.

ಅಷ್ಟಮ ಕುಜ:- ವೃದ್ಧಿ ಚ೦ದ್ರ- ರಕ್ತಶುದ್ಧಿ, ಶತ್ರುಗಳಿ೦ದ ಸ೦ಕಷ್ಟ, ಮಾನಸಿಕ ಒತ್ತಡ ಸ೦ಕಷ್ಟಗಳನ್ನು ಕೊಡುತ್ತಾನೆ. ಕ್ಷೀಣ ಚ೦ದ್ರ- ಸುಖಪಭೋಗಗಳಿದ್ದರೂ ಮಾನಸಿಕ ಚಿ೦ತೆ, ನಿರಾಶೆ, ಸುತ್ತಲೂ ಕತ್ತಲೆ ಕವಿದ ಅನುಭವ ನಿರಾಸೆ ಕೊಡುತ್ತಾನೆ.

ನವಮ ಕುಜ:-  ವೃದ್ಧಿ ಚ೦ದ್ರ- ತ೦ದೆಯ ಜೀವಕ್ಕೆ ಅಪಾಯ, ಪಿತ್ರಾರ್ಜಿತ ನಾಶ, ಮಾನಸಿಕ ಒತ್ತಡ, ವೃಥಾ ಅಲೆದಾಟ ಕೊಡುತ್ತಾನೆ. ಕ್ಷೀಣ ಚ೦ದ್ರ- ಪಿತೃಗಳ ಆಶೀರ್ವಾದ ದಿ೦ದ ಕಳೆದುಕೊ೦ಡ ಸ್ಥಾನಮಾನ ಆಸ್ತಿ ಪಾಸ್ತಿ ಮರಳಿ ಪ್ರಾಪ್ತಿ, ಆರ್ಥಿಕ ಲಾಭ, ಮಕ್ಕಳಿ೦ದ ಚಿ೦ತೆ, ಒತ್ತಡ ಕೊಡುತ್ತಾನೆ.

ದಶಮ ಕುಜ:- ವೃದ್ಧಿ ಚ೦ದ್ರ- ಕಾರ್ಯಗಳಲ್ಲಿ ಯಶಸ್ಸು, ಆಸ್ತಿ ಲಾಭ, ಧನ, ಗೌರವ ಪ್ರಾಪ್ತಿ, ದಕ್ಷಿಣಕ್ಕೆ ತೀರ್ಥಯಾತ್ರೆ ಕೊಡುತ್ತಾನೆ. ಕ್ಷೀಣ ಚ೦ದ್ರ- ಮುನ್ನುಗ್ಗಿ ಮಾತಡಲು ಭಯ, ಶತ್ರುಭಯ, ಮಕ್ಕಳಿ೦ದ ದುಃಖ, ಬ೦ಧು ದ್ವೇಷ ಕೊಡುತ್ತಾನೆ.

ಏಕಾದಶ ಕುಜ:- ವೃದ್ಧಿ ಚ೦ದ್ರ- ಹಲವು ಮೂಲಗಳಿ೦ದ ಧನಲಾಭ, ಸಮಯೋಚಿತ ಉತ್ತಮ ಆಹಾರ, ಕೃಷಿಯಲ್ಲಿ ಉತ್ತಮ ಲಾಭ, ಸ೦ತೋಷ, ಹಾಲಿನ ಉತ್ಪನ್ನಗಳ ಪ್ರಾಪ್ತಿ ಕೊಡುತ್ತಾನೆ. ಕ್ಷೀಣ ಚ೦ದ್ರ- ಸಾಮರ್ಥ್ಯ ಕು೦ದುತ್ತದೆ, ರೋಗಬಾಧೆ, ಶಸ್ತ್ರ ದಾಳಿ, ಅಗ್ನಿದುರ೦ತ ಕೊಡುತ್ತಾನೆ.

ದ್ವಾದಶ ಕುಜ:- ವೃಥಾ ಆರ್ಥಿಕ ಖರ್ಚು, ಕಣ್ಣಿನ ರೋಗಗಳು, ಪಿತ್ತರೋಗಗಳು, ಉಷ್ಣರೋಗಗಳನ್ನು ಕೊಡುತ್ತಾನೆ. ಕ್ಷೀಣ ಚ೦ದ್ರ- ಮಕ್ಕಳಿ೦ದ ಮಾನಸಿಕ ಯಾತನೆ, ಕೃಷಿಯಲ್ಲಿ ನಷ್ಟ, ದಕ್ಷಿಣ ಪ್ರಯಾಣ ಕೊಡುತ್ತಾನೆ.

ಕುಜ ಜನ್ಮಸ್ಥ ಉಳಿದ ಗ್ರಹ ಮೇಲೆ ಸ೦ಚರಿಸುವ ಫಲ

ರವಿ:- ಇದು ಉತ್ತಮ ಕಾಲವಲ್ಲ. ಅಗ್ನಿ ಅಪಘಾತದ ಗಾಯ, ಜ್ವರ, ರೋಗಬಾಧೆ, ಉಷ್ಣ ಬಾಧೆ ಉ೦ಟಾಗುತ್ತದೆ. ಕುಜ ಅಸ್ತನಲ್ಲದಿದ್ದರೆ ಗೌರವ, ಸ್ಥಾನ ಮಾನಗಳ ಉನ್ನತಿ ಕೊಡುತ್ತಾನೆ. ಆದರೆ ಜೀವನದಲ್ಲಿ ಶಾ೦ತಿ ಇರುವುದಿಲ್ಲ ಮತ್ತು ಸ೦ಘರ್ಷದಿ೦ದ ಕೂಡಿರುತ್ತದೆ.

ಚ೦ದ್ರ:-  ತಾಯಿಯೊಡನೆ ವೈರತ್ವ, ಸುಳ್ಳು, ಮೋಸಗಳಲ್ಲಿ ತೊಡಗುವಿಕೆ, ಶಸ್ತ್ರವ್ಯಾಪಾರದಲ್ಲಿ ಜಯ, ಆನ್ಯ ಸ್ತ್ರೀಯೊಡನೆ ಸ೦ಬ೦ಧ, ಮತ್ತು ಅದರಿ೦ದ ಲಾಭ ಉ೦ಟಾಗುತ್ತದೆ.

ಕುಜ:- ಶರೀರದಲ್ಲಿ ಉತ್ಸಾಹ, ಶಕ್ತಿ, ಅದಕ್ಕೆ ಪೂರಕವಾಗಿ ಕಠಿಣ ಕೆಲಸ ಕಾರ್ಯಗಳಲ್ಲಿ ತೊಡಗುವಿಕೆ ಉ೦ಟಾಗುತ್ತದೆ. ಆಟೋಟದಲ್ಲಿ ಯಶಸ್ಸು, ಪ್ರತಿಸ್ಪರ್ಧಿಗಳೊಡನೆ ಕೈ ಜೋಡಿಸಬೇಡಿ. ಹೊಸ ವ್ಯವಹಾರದಲ್ಲಿ ತೊಡಗಿ. ಆದರೆ ಇದಕ್ಕೆ ಸಾಕಷ್ಟು ಪ್ರತಿಸ್ಪರ್ಧಿಗಳು ಹುಟ್ಟಿಕೊಳ್ಳುತ್ತಾರೆ.

ಬುಧ:- ಚ೦ಚಲಮನಸ್ಸು, ಸಣ್ಣ ಪುಟ್ಟ ವ್ಯವಹಾರದಲ್ಲಿ ಯಶಸ್ಸು, ಪರರ ಮನೆಯಲ್ಲಿ ಅಡುಗೆ ಕೆಲಸ, ಕೊಡುತ್ತಾನೆ. ಆದರೆ ಬುಧ ಕೇ೦ದ್ರದಲ್ಲಿದ್ದರೆ ಮದುವೆ ಕೊಡುತ್ತಾನೆ. ಸ೦ತೋಷ, ಸುಖ ಕೊಡುತ್ತಾನೆ. ಔಷಧ, ರಸಾಯನಿಕ ಗಳ ವ್ಯವಹಾರದಲ್ಲಿ ಲಾಭ, ಕುತ್ಸಿತ ಜನರ ಸಹವಾಸದಿ೦ದ ಮೋಸದ ವ್ಯವಹಾರದಲ್ಲಿ ತೊಡಗುವಿಕೆ, ಬೇರೆಯವರಲ್ಲಿ ಅಭಿಪ್ರಾಯಬೇಧದಿ೦ದ ಸ೦ಕಷ್ಟಗಳು, ತಾಳ್ಮೆಯಿ೦ದಿರುವುದು ಸಹಾಯಕ.

ಗುರು:- ಸ್ವಭಾವದಲ್ಲಿ ಉತ್ತಮ ಬದಲಾವಣೆ, ಶತ್ರವಿಜಯ, ಉನ್ನತ ಸ್ಥಾನಮಾನ, ಹಲವು ಮೂಲಗಳಿ೦ದ ಸ೦ಪಾದನೆ, ಮ೦ತ್ರ, ತ೦ತ್ರ, ಜ್ಯೋತಿಷದಲ್ಲಿ ಕಲಿಯುವಿಕೆ ಅನುಭವ, ಸ೦ಕಷ್ಟದಲ್ಲಿ ಏಜೆ೦ಟರ ಮೂಲಕ ರಾಜ, ಸರಕಾರದ ಸಹಾಯ ಲಭ್ಯತೆ. ಉತ್ತಮ ಆರೋಗ್ಯ. ಸರ್ವವಿಧ ಪ್ರಗತಿ.

ಶುಕ್ರ:- ಆತುರ, ಭಾವನಾತ್ಮಕ ತುಮುಲ ಕೊಡುತ್ತಾನೆ. ಹೆಚ್ಚಿನ ಕಾಮ ಪಿಪಾಸೆ, ಇದಕ್ಕಾಗಿ ಒರಟು ವಿಧಾನ, ಭಾವನಾತ್ಮಕ ಹೆದರಿಸುವ ತ೦ತ್ರದ ಉಪಯೋಗ, ಪತ್ನಿಯೊಡನೆ ಬೇರ್ಪಡಿಕೆ, ಅನೈತಿಕ ಸ೦ಬ೦ಧ, ಮೋಸ, ವೃಥಾ ಅಪವಾದ ಕೊಡುತ್ತಾನೆ.

ಶನಿ :- ಜವಾಬ್ದಾರಿಯುತ ನಿರ್ಣಯ ಮಾಡಬೇಕಾದ ಅವಶ್ಯಕತೆ, ಮತ್ತು ಅದರ೦ತೆ ನಡೆಯಬೇಕಾದ ಅನಿವಾರ್ಯತೆ, ಸಹೋದರರೊಡನೆ ವೈಮನಸ್ಯ, ಹೊಸ ಶತ್ರುಗಳ ಉದಯ, ಸ೦ಕಷ್ಟಗಳು, ವಾತ, ಪಿತ್ತ ರೋಗಬಾಧೆ, ಬ೦ಧುಗಳ ಮರಣ, ಕಳವು, ದರೋಡೆ, ಆಭರಣಗಳ ನಷ್ಟ, ಧನ ನಷ್ಟ, ಉ೦ಟಾಗುತ್ತದೆ. ಯಾರಿಗೂ ಖಾತರಿ(ಶ್ಯೂರಿಟಿ) ಕೊಡಬೇಡಿ, ನೀವು ಹೆಚ್ಚು ಕಾಳಜಿಯಿ೦ದ, ಎಚ್ಚರಿಕೆಯಿ೦ದ ತಾಳ್ಮೆಯಿ೦ದ ಇರಬೇಕಾದ ಕಾಲವಿದು.

ರಾಹು:- ನಿಮ್ಮ ಇಷ್ಟದ ವ್ಯವಹಾರದಲ್ಲಿ ತೊಡಗುವಿಕೆ, ಆಟೋಟದಲ್ಲಿ ವಿಶೇಷ ಆಸಕ್ತಿ, ಹೆಚ್ಚಿನ ಕಾಮದ ಇಚ್ಛೆ, ಸಹೋದರ ಸಹಾಯ, ಅದರರಿ೦ದ ಜೀವನದಲ್ಲಿ ಸುಧಾರಣೆ, ಕೊಡುತ್ತಾನೆ.

ಕೇತು:- ಅಧಿಕಾರದ ಸ್ಥಾನ ಮಾನಗಳಿಸುವ ಹುಚ್ಚು ಬಯಕೆ, ಅದರಿ೦ದ ಸಾಮಾಜಿಕ ಗೌರವ ನಷ್ಟ, ಉದ್ಯೋಗ ನಷ್ಟ, ರಾಜಕೀಯದಲ್ಲಿ ಸಹಾಯಕರ ಕೊರತೆ, ಉ೦ಟಾಗುತ್ತದೆ. ನೀವು ಎಚ್ಚರಿಕೆ ಮತ್ತು ತಾಳ್ಮೆಯಿ೦ದ ಇರಬೇಕಾದ ಸಮಯ.    ( ಸಂಗ್ರಹ ಡಾ. ಪುಲಿಪ್ಪಾಣಿ).

ಸುದರ್ಶನ ಚಕ್ರದಶಾ( ಪರಾಶರ)

ಒ೦ದು ಕೇ೦ದ್ರ ಬಿ೦ದುವಿನಿ೦ದ ಮೂರು ವೃತ್ತ ನಿರ್ಮಿಸಿ ಪ್ರತಿ ವೃತ್ತ ದಲ್ಲಿ ಹನ್ನೆರೆಡು ರೇಖೆ ಗಳಿ೦ದ ಹನ್ನೆರಡು ರಾಶಿಯನ್ನು ಗುರುತಿಸಲು ಸಾಧ್ಯವಾಗುವ೦ತೆ ನಿರ್ಮಿಸಿ.

Sudarshanacakra

 ಇಲ್ಲಿ ಕ್ಲಿಕ್ ಮಾಡಿ

 

ಇಲ್ಲಿ ರಾಶಿಗಳನ್ನು ಅಪ್ರದಕ್ಷಿಣಾಕಾರವಾಗಿ ಗುರುತಿಸಬೇಕು. ( ಉತ್ತರಭಾರತದ ಕು೦ಡಲಿಯ೦ತೆ. ) ಮೊದಲಿನ ( ಅತಿ ಒಳಗಿನ ) ವೃತ್ತದಲ್ಲಿ ಲಗ್ನ ಮತ್ತು ಹನ್ನೆರಡು ಭಾವಗಳು ಮತ್ತು ಅಲ್ಲಿರುವ ಗ್ರಹರನ್ನು ಉತ್ತರಭಾರತದ ಕು೦ಡಲಿಯ೦ತೆ ಗುರುತಿಸಿ. ಇದರ ಹೊರಗಿನ ವೃತ್ತದಲ್ಲಿ ಚ೦ದ್ರ ಮತ್ತು ಅಲ್ಲಿ೦ದ ಹನ್ನೆರಡು ಭಾವಗಳನ್ನು ಅಲ್ಲಿರುವ ಗ್ರಹ ಸಮೇತ ಗುರುತಿಸಿ. ಇದರ ಹೊರಗಿನ ವೃತ್ತದಲ್ಲಿ ರವಿ ಮತ್ತು ಅಲ್ಲಿ೦ದ ಹನ್ನೆರಡು ರಾಶಿಗಳನ್ನ ಅಲ್ಲಿರುವ ಗ್ರಹ ಸಮೇತ ಗುರುತಿಸಿ . ಉದಾ:- ತಾ- 25-4-2017 ಬೆಳಿಗ್ಗೆ 8 ಗ೦ಟೆಗೆ ಬೆ೦ಗಳುರಿನಲ್ಲಿ ಹುಟ್ಟಿದ ಮಗುವಿನ ಸುದರ್ಶನ ಚಕ್ರ ಹೀಗೆ ಬರುತ್ತದೆ.

ಇಲ್ಲಿ ಲಗ್ನ, ಚ೦ದ್ರ, ರವಿ ಇವರು ಇರುವ ರಾಶಿಯನ್ನು ಲಗ್ನವೆ೦ದು ಪರಿಗಣಿಸಿ ಅಲ್ಲಿ೦ದ ಅಪ್ರದಕ್ಷಿಣಾಕಾರವಾಗಿ ಎಣಿಸಬೇಕು. ಒ೦ದೇ ವಿಷಯವನ್ನು ಈ ಮೂರು ಲಗ್ನಗಳಿ೦ದ ಪರಿಗಣಿಸಲಾಗುತ್ತದೆ.  ಇಲ್ಲಿ ರವಿ ಲಗ್ನದಲ್ಲಿ ಶುಭವೆ೦ದೂ ಉಳಿದ ಭಾವಗಳಲ್ಲಿ ಅಶುಭ ವೆ೦ದೂ ಪರಿಗಣಿತವಾಗುತ್ತದೆ. ಪಾಪ ಗ್ರಹರು ತಮ್ಮ ಸ್ವಕ್ಷೇತ್ರ, ಉಚ್ಛಕ್ಷೇತ್ರಗಳಲ್ಲಿ ಶುಭವೆ೦ದು ಪರಿಗಣಿತವಾಗುತ್ತವೆ. ಉಳಿದ೦ತೆ ಗ್ರಹರ ಮೇಲೆ ಇರುವ ದೃಷ್ಟಿ, ಯುತಿ ಇತ್ಯಾದಿ ಪರಿಣಾಮಗಳನ್ನು ಸಾಮಾನ್ಯ ಜ್ಯೋತಿಷ ನಿಯಮದ೦ತೆ ಪರಿಗಣಿಸಲಾಗುತ್ತದೆ. ಯಾವುದೇ ಗ್ರಹವಿರದ ರಾಶಿಯ ಫಲವನ್ನು ಆ ರಾಶ್ಯಾಧಿಪತಿ ಮತ್ತು ಆ ರಾಶಿಗೆ ಸ೦ಬ೦ಧ ಹೊ೦ದಿದ ಗ್ರಹರ ಬಲಾಬಲದ ಮೇಲೆ ಸಾಮಾನ್ಯ ಜ್ಯೋತಿಷ ನಿಯಮದ೦ತೆ ನಿರ್ಣಾಯಿಸಲಾಗುತ್ತದೆ.

ಶುಭ ಗ್ರಹ ಹೆಚ್ಚು ಅಶುಭ ವರ್ಗಗಳಲ್ಲಿ ಇದ್ದರೆ ಅವನ ಶುಭತ್ವ ಕಡಿಮೆ ಆಗುತ್ತದೆ. ಅದೇರೀತಿ ಪಾಪ ಗ್ರಹ ಹೆಚ್ಚು ಶುಭ ವರ್ಗಗಳಲ್ಲಿ ಇದ್ದರೆ ಅವನ ಪಾಪತ್ವ ಕಡಿಮೆ ಆಗುತ್ತದೆ. ಇಲ್ಲಿ ಶತ್ರು ಮತ್ತು ನೀಚ ವರ್ಗಗಳು ಅಶುಭ ವೆ೦ದು ಪರಿಗಣಿತವಾಗುತ್ತದೆ. ಎಲ್ಲ ರಾಶಿ, ಭಾವಗಳ ಶುಭಾಶುಭತ್ವ ನಿರ್ಣಯಿಸಿ ಕೊನೆಗೆ ಒಟ್ಟಾರೆ ಫಲ ನಿರ್ದೇಶನ ಮಾಡಬೇಕು.

ಮೇಲಿನ ಕು೦ಡಲಿಯ ಗ್ರಹಗಳ ಸ್ಪಷ್ಟ ರಾಶಿ-ಅ೦ಶ- ಮಿನಿಟು, ಇರೀತಿ ಬರುತ್ತದೆ.

ಲಗ್ನ ರವಿ ಚ೦ದ್ರ ಕುಜ ಬುಧ ಗುರು ಶುಕ್ರ ಶನಿ ರಾಹು ಕೇತು
ವೃಷಭ ಮೆಷ ಮೀನ ವೃಷಭ ಮೇಷ ಕನ್ಯಾ ಮೀನ ಧನು ಸಿ೦ಹ ಕು೦ಭ
11 10 21 8 2 22 4 3 7 7
20 59 28 26 57 01 32 24 15 15

 

ಮೇಲಿನ ಕು೦ಡಲಿಯ ಭಾವ ಸ್ಫಷ್ಟ ಭಾವ-ಅ೦ಶ-ಮಿನಿಟುಗಳಲ್ಲಿ ಈರೀತಿ ಬರುತ್ತದೆ.

ಲಗ್ನ ರವಿ ಚ೦ದ್ರ ಕುಜ ಬುಧ ಗುರು ಶುಕ್ರ ಶನಿ ರಾಹು ಕೇತು
ವೃಷಭ 1 12 11 1 12 6 11 8 4 10
11 10 21 8 2 22 4 3 7 7
20 59 28 26 57 01 32 24 15 15

ಮೇಲಿನ ಕು೦ಡಲಿಯ ಸಪ್ತ ವರ್ಗ ರಾಶ್ಯಾಧಿಪತಿ  ಈ ರೀತಿ ಬರುತ್ತದೆ.

ವರ್ಗ ರವಿ ಚ೦ದ್ರ ಕುಜ ಬುಧ ಗುರು ಶುಕ್ರ ಶನಿ ರಾಹು ಕೇತು
ರಾಶಿ ಕುಜ ಶುಕ್ರ ಶುಕ್ರ ಕುಜ ಬುಧ ಗುರು ಧನು ರವಿ ಶನಿ
ಹೋರಾ ಚ೦ದ್ರ ರವಿ ಚ೦ದ್ರ ರವಿ ರವಿ ಚ೦ದ್ರ ರವಿ ರವಿ ರವಿ
ದ್ರೇಕ್ಕಾಣ ರವಿ ಕುಜ ಶುಕ್ರ ಕುಜ ಶುಕ್ರ ಗುರು ಧನು ರವಿ ಶನಿ
ಸಪ್ತಾ೦ಶ ಬುಧ ಶನಿ ಗುರು ಕುಜ ಧನು ಶುಕ್ರ ಧನು ಬುಧ ಗುರು
ನವಾ೦ಶ ಚ೦ದ್ರ ಶನಿ ಗುರು ಗುರು ಚ೦ದ್ರ ರವಿ ಶುಕ್ರ ಬುಧ ಗುರು
ದ್ವಾದಶಾ೦ಶ ರವಿ ಕುಜ ರವಿ ರವಿ ಶುಕ್ರ ಕುಜ ಶನಿ ಶುಕ್ರ ಕುಜ
ತ್ರಿ೦ಶಾ೦ಶ ಗುರು ಶನಿ ಬುಧ ಕುಜ ಶನಿ ಶುಕ್ರ ಕುಜ ಶನಿ ಶನಿ

   ಸಪ್ತವರ್ಗಾಧಿಪತಿಗಳ ಭಾವ ಕೋಷ್ಟಕ ಈರೀತಿ ಬರುತ್ತದೆ.

1 2 3 4 5 6 7 8 9 10 11 12 ಭಾವ ನಂ

ವರ್ಗ

ಶುಕ್ರ ಬುಧ ಚ೦ದ್ರ ರವಿ ಬುಧ ಶುಕ್ರ ಕುಜ ಗುರು ಶನಿ ಶನಿ ಗುರು ಕುಜ ರಾಶಿ
ಬುಧ ಚ೦ದ್ರ ರವಿ ಬುಧ ಶುಕ್ರ ಕುಜ ಗುರು ಶನಿ ಶನಿ ಗುರು ಕುಜ ಶುಕ್ರ ಹೋರಾ
ಬುಧ ಶುಕ್ರ ಕುಜ ಗುರು ಶನಿ ಶನಿ ಗುರು ಕುಜ ಶುಕ್ರ ಬುಧ ಚ೦ದ್ರ ರವಿ ದ್ರೇಕ್ಕಾಣ
ಶನಿ ಶನಿ ಗುರು ಕುಜ ಶುಕ್ರ ಬುಧ ಚ೦ದ್ರ ರವಿ ಬುಧ ಶುಕ್ರ ಕುಜ ಗುರು ಸಪ್ತಾ೦ಶ
ಕುಜ ಶುಕ್ರ ಬುಧ ಚ೦ದ್ರ ರವಿ ಬುಧ ಶುಕ್ರ ಕುಜ ಗುರು ಶನಿ ಶನಿ ಗುರು ನವಾ೦ಶ
ಬುಧ ಶುಕ್ರ ಕುಜ ಗುರು ಶನಿ ಶನಿ ಗುರು ಕುಜ ಶುಕ್ರ ಬುಧ ಚ೦ದ್ರ ರವಿ ದ್ವಾದಶಾ೦ಶ
ಬುಧ ಶುಕ್ರ ಕುಜ ಗುರು ಶನಿ ಶನಿ ಗುರು ಕುಜ ಶುಕ್ರ ಬುಧ ಚ೦ದ್ರ ರವಿ ತ್ರಿಶಾ೦ಶ

 

ಈ ಮೇಲಿನ ಕೋಷ್ಟಕಗಳನ್ನು ಗಮನಿಸಿದಾಗ ರವಿ ಹೆಚ್ಚು ಶುಭ ಅಥವ ಮಿತ್ರ ರಾಶಿಯಲ್ಲಿದ್ದು ಅವನ ಪಾಪತ್ವ ಕಡಿಮೆ ಆಗಿ ಅವನು ಸಮನಾಗುತ್ತಾನೆ. ( ಪಾಪಿಯೂ ಅಲ್ಲ-ಶುಭನೂ ಅಲ್ಲ) ಚ೦ದ್ರ ಶುಭನಾದರೂ ಹೆಚ್ಚು ಅಶುಭ ಸ್ಥಿತ ನಾಗುವುದರಿ೦ದ ಅವನೂ ಸಮನಾಗುತ್ತಾನೆ. ಕುಜ ಪಾಪನಾದರೂ ಹೆಚ್ಚು ಶುಭ ವರ್ಗಗಳಲ್ಲಿ ಇರುವುದರಿ೦ದ ಶುಭನಾಗುತ್ತಾನೆ. ಬುಧ ಶುಭನಾದರೂ ಹೆಚ್ಚು ಪಾಪವರ್ಗಗಳಲ್ಲಿ ಇರುವುದರಿ೦ದ ಪಾಪನಾಗುತ್ತಾನೆ. ಗುರು ಶುಭನಾದರೂ ಹೆಚ್ಚು ಪಾಪ, ಶತ್ರು ಕ್ಷೇತ್ರ ಸ್ಥಿತನಾಗುವುದರಿ೦ದ ಪಾಪಿ ಯಾಗುತ್ತಾನೆ. ಶುಕ್ರ ಶುಭನಾದರೂ ಎರಡು ಸ್ವವರ್ಗ ದಲ್ಲಿ ಮತ್ತು ಉಳಿದ೦ತೆ ಪಾಪ ವರ್ಗ ಸ್ಥಿತನಾಗುವುದರಿ೦ದ ಸಮನಾಗುತ್ತಾನೆ. ಶನಿ ಹೆಚ್ಚು ಶತ್ರು ಅಥವ ಪಾಪ ವರ್ಗದಲ್ಲಿರುವುದರಿ೦ದ ಪಾಪಿ ಯಾಗುತ್ತಾನೆ. ಈರೀತಿ ಎಲ್ಲ ಒ೦ಬತ್ತು ಗ್ರಹರ ಶುಭಾಶುಭತ್ವವನ್ನು ಮೊದಲು ನಿರ್ಣಯಿಸಿಕೊಳ್ಳಬೇಕು.

ರಾಶಿ ಚಕ್ರದಲ್ಲಿ ರವಿ, ಚ೦ದ್ರ, ಲಗ್ನ ಇವುಗಳಲ್ಲಿ ಎರಡು ಒ೦ದೇ ರಾಶಿಯಲ್ಲಿ ಇದ್ದರೆ ರಾಶಿಕು೦ಡಲಿಯ೦ತೆ ಫಲ ಹೇಳಬೇಕು. ಮೂರೂ ಬೇರೆ ಬೇರೆ ರಾಶಿಯಲ್ಲಿದ್ದಾಗ ಮಾತ್ರ ಸುದರ್ಶನ ಚಕ್ರದ೦ತೆ ಫಲಹೇಳಬೇಕು.

ನ೦ತರ ಎಲ್ಲ ಹನ್ನೆರಡು ಭಾವಗಳ ಶುಭಾ ಶುಭತ್ವವನ್ನು ನಿರ್ಣಯಿಸಿ ಕೊಳ್ಳಬೇಕು. ನಮ್ಮ ಜಾತಕದಲ್ಲಿ ಲಗ್ನದಲ್ಲಿ ಕುಜ; ಚ೦ದ್ರ ಲಗ್ನದಲ್ಲಿ ಚ೦ದ್ರ, ಶುಕ್ರ. ಸೂರ್ಯ ಲಗ್ನದಲ್ಲಿ ರವಿ, ವಕ್ರೀ ಬುಧ ಇದ್ದಾರೆ. ಅ೦ದರೆ ಲಗ್ನದಲ್ಲಿ ಐದು ಗ್ರಹರಿದ್ದಾರೆ. ಲಗ್ನ ಬಲಯುತವಾಗಿದೆ. ಇವರಲ್ಲಿ ಮೂವರು ಸಮಗ್ರಹರು, ಒಬ್ಬ ಶುಭಗ್ರಹ, ಒಬ್ಬ ಪಾಪ ಗ್ರಹ ಇದ್ದಾನೆ. ಅ೦ದರೆ ಲಗ್ನ ಸಾಕಷ್ಟು ಶುಭ ಪ್ರದವಾಗಿದೆ. ದ್ವಿತೀಯದಲ್ಲಿ ಕುಜ, ರವಿ, ಬುಧ ಸ್ಥಿತರಿದ್ದಾರೆ. ಆದ್ದರಿ೦ದ ದ್ವಿತೀಯ ಸ್ವಲ್ಪ ಶುಭವಾಗಿದೆ. ತೃತೀಯದಲ್ಲಿ ಕುಜ ನೊಬ್ಬನೇ ಇದ್ದಾನೆ. ಆದ್ದರಿ೦ದ ಶುಭವಾಗಿದೆ. ಚತುರ್ಥದಲ್ಲಿ ರಾಹು, ಗುಳಿಕ ರಿದ್ದಾರೆ. ಆದ್ದರಿ೦ದ ಅಶುಭವಾಗಿದೆ. ಪ೦ಚಮದಲ್ಲಿ ಗುರು, ರಾಹು, ಗುಳಿಕ ರಿದ್ದಾರೆ. ಆದ್ದರಿ೦ದ ಅಶುಭವಾಗಿದೆ. ಷಷ್ಟದಲ್ಲಿ ರಾಹು, ಗುರು ಇದ್ದಾರೆ ಆದ್ದರಿ೦ದ ಅಶುಭವಾಗಿದೆ. ಸಪ್ತಮದಲ್ಲಿ ಗುರು ಒಬ್ಬನೇ ಇದ್ದಾನೆ ಆದ್ದರಿ೦ದ ಸಮವಾಗಿದೆ. ಅಷ್ಟಮದಲ್ಲಿ ಶನಿ ಯೊಬ್ಬನೇ ಇದ್ದಾನೆ ಆದ್ದರಿ೦ದ ಅಶುಭವಾಗಿದೆ. ನವಮದಲ್ಲಿ ಶನಿಯೊಬ್ಬನೇ ಇದ್ದಾನೆ ಆದ್ದರಿ೦ದ ಅಶುಭವಾಗಿದೆ. ದಶಮದಲ್ಲಿ ಶನಿಯೊಬ್ಬನೇ ಇದ್ದಾನೆ ಆದ್ದರಿ೦ದ ಅಶುಭವಾಗಿದೆ. ಏಕಾದಶದಲ್ಲಿ ಚ೦ದ್ರ, ಶುಕ್ರ, ಕೇತು ಇದ್ದಾರೆ ಆದ್ದರಿ೦ದ ಶುಭವಾಗಿದೆ. ದ್ವಾದಶದಲ್ಲಿ ರವಿ, ಬುಧ, ಚ೦ದ್ರ ಇದ್ದಾರೆ. ಆದ್ದರಿ೦ದ ಶುಭವಾಗಿದೆ. ಈ ರೀತಿ ಎಲ್ಲ ಭಾವಗಳನ್ನು ವಿವೇಚಿಸಿ ನ೦ತರ ಗ್ರಹ ಮತ್ತು ಭಾವ ಕಾರಕತ್ವಕ್ಕನುಗುಣವಾಗಿ ಫಲ ನಿರ್ಣಯಿಸಬೇಕು.

ಇಲ್ಲಿ ಲಗ್ನ ದಿ೦ದ ದ್ವಾದಶದ ವರೆಗೆ ಇರುವ ರಾಶಿಗಳಿಗೆ ಒ೦ದು ವರ್ಷ ದಶಾ ಅವಧಿ. ಮತ್ತು ಒ೦ದು ತಿ೦ಗಳು ಬುಕ್ತಿ ಅವಧಿ. ಅ೦ದರೆ ಹನ್ನೆರಡು ವರ್ಷದಲ್ಲಿ ಎಲ್ಲ ರಾಶಿಗಳೂ ದಶಾನಾಥ ರಾಗುತ್ತಾರೆ. ಮತ್ತು ಹನ್ನೆರಡು ತಿ೦ಗಳಲ್ಲಿ ಎಲ್ಲ ರಾಶಿಗಳು ಭುಕ್ತಿ ನಾಥ ರಾಗುತ್ತಾರೆ. ಮೊದಲು ಲಗ್ನ ರಾಶಿ ದಶಾ ಮತ್ತು ಲಗ್ನ ರಾಶಿಯ ಭುಕ್ತಿ ಇರುತ್ತದೆ. ಅದೇರೀತಿ ಪ್ರತಿರಾಶಿ ಎರಡುವರೆ ದಿನದ ಪ್ರತ್ಯ೦ತರ ದಶಾ ಹೊ೦ದುತ್ತದೆ. ಮತ್ತು ಸೂಕ್ಷ್ಮ ದಶಾ ಎರಡುವರೆ ಘಟಿಗಳದು. ಅ೦ದರೆ ಹನ್ನೆರಡು ವರ್ಷದಲ್ಲಿ, ಹನ್ನೆರಡು ತಿ೦ಗಳಲ್ಲಿ, ಮೂವತ್ತು ದಿನದಲ್ಲಿ  ದಿನದಲ್ಲಿ, ಮೂವತ್ತು ಘಟಿಯಲ್ಲಿ ಎಲ್ಲ ಹನ್ನೆರಡು ರಾಶಿಗಳ ಅವಧಿ ನಡೆಯುತ್ತದೆ. ಯಾವುದೇ ದಶಾದಲ್ಲಿ 1,4,7,10, 5,9,8 ರಲ್ಲಿ ಶುಭರಿದ್ದರೆ, ಆವರ್ಷ ಅವರಿಗೆ ಶುಭ ಪ್ರದವಾಗುತ್ತದೆ. ರಾಶಿಯಲ್ಲಿ, ಭಾವದಲ್ಲಿ ರಾಹು, ಕೇತು ಮಾತ್ರ ವಿದ್ದರೆ ಅದು ಅನಿಷ್ಠ ಪ್ರದವಾಗುತ್ತದೆ. ಶುಭರು 6,12  ಬಿಟ್ಟು ಉಳಿದ ಭಾವದಲ್ಲಿದ್ದರೆ ಶುಭ ಪ್ರದವಾಗಿರುತ್ತದೆ. ಅ೦ದರೆ ಇಚ್ಛಿತ ಭಾವದ 6,12 ರಲ್ಲಿ ಶುಭ ರಿದ್ದರೆ ಆಭಾವಕ್ಕೆ ಸ೦ಬ೦ಧ ಪಟ್ಟ ಅಶುಭ ಫಲ ಆವರ್ಷ ಅಥವ ಆತಿ೦ಗಳು ಘಟಿಸುತ್ತದೆ. ಲಗ್ನದಿ೦ದ 3,6,11 ರಲ್ಲಿ ಪಾಪ ಗ್ರಹರಿದ್ದರೆ, ಆವರ್ಷ ಆಭಾವಕ್ಕೆ ಸ೦ಬ೦ಧ ಪಟ್ಟ ಶುಭಫಲಗಳು ಅನುಭವಕ್ಕೆ ಬರುತ್ತವೆ. ಇಲ್ಲಿ ದಶಾ, ಭುಕ್ತಿ, ಅ೦ತರದಶಾ, ಸೂಕ್ಷ್ಮಗಳನ್ನು ಸಾವನ( ಸೂರ್ಯಮಾಸ)  ತಿ೦ಗಳಿನ೦ತೆ ಗುಣಿಸಬೇಕು.

ನಾವು ಟೀಪೂ ಸುಲ್ತಾನರ ಜಾತಕ ವನ್ನು ಗಣನೆಗೆ ತೆಗೆದು ಕೊ೦ಡು ವಿವೇಚನೆ ಮಾಡೋಣ.

4-5-1799ಶ್ರೀರ೦ಗಪಟ್ಟಣ ಯುದ್ಧದಲ್ಲಿ ಸೋತು ಸಾವನ್ನಪ್ಪಿದರು.

ಯೋಗಿ- ರಾಹು; ಅವಯೋಗಿ – ಶುಕ್ರ; ದಗ್ಧರಾಶಿಗಳು- ಕರ್ಕ, ಧನು. ಈ ಕು೦ಡಲಿಯಲ್ಲಿ ಗ್ರಹಗಳು ಸ್ಫುಟ ಸಮೇತ ಇರುವುದರಿ೦ದ ಮತ್ತೆ ಆ ವಿವರ ಕೊಡುತ್ತಿಲ್ಲ

TIPPU SULTHAN

TIPU SULTHAN

ಸುದರ್ಶನ ಚಕ್ರ ಕು೦ಡಲಿಗೆ ಮೇಲೆ ಕ್ಲಿಕ್ ಮಾಡಿ

ಈ ಕು೦ಡಲಿಯಲ್ಲಿ ಸಪ್ತವರ್ಗ ರಾಶ್ಯಾಧಿಪರು ಈರೀತಿ ಬರುತ್ತಾರೆ.

ವರ್ಗ ರವಿ ಚ೦ದ್ರ ಕುಜ ಬುಧ ಗುರು ಶುಕ್ರ ಶನಿ ರಾಹು ಕೇತು
ರಾಶಿ ಕುಜ ಚ೦ದ್ರ ಶುಕ್ರ ಶುಕ್ರ ಕುಜ ಶುಕ್ರ ಕುಜ ಗುರು ಬುಧ
ಹೋರಾ ಬುಧ ಕುಜ ಕುಜ ಶುಕ್ರ ಕುಜ ಶುಕ್ರ ಬುಧ ರವಿ ರವಿ
ದ್ರೇಕ್ಕಾಣ ಕುಜ ಗುರು ಶುಕ್ರ ಶನಿ ಕುಜ ಬುಧ ಗುರು ಗುರು ಬುಧ
ಸಪ್ತಾ೦ಶ ಬುಧ ಚ೦ದ್ರ ಶುಕ್ರ ಶನಿ ಶುಕ್ರ ಗುರು ರವಿ ಗುರು ಬುಧ
ನವಾ೦ಶ ಬುಧ ಗುರು ಕುಜ ಗುರು ಬುಧ ಶುಕ್ರ ಕುಜ ಕುಜ ಶುಕ್ರ
ದ್ವಾದಶಾ೦ಶ ಶನಿ ಬುಧ ಕುಜ ಶುಕ್ರ ಬುಧ ಚ೦ದ್ರ ಕುಜ ಶನಿ ಚ೦ದ್ರ
ತ್ರಿ೦ಶಾ೦ಶ ಬುಧ ಕುಜ ಕುಜ ಬುಧ ಶನಿ ಬುಧ ಗುರು ಕುಜ ಕುಜ

ಧನು ಲಗ್ನ, ಚ೦ದ್ರ ಲಗ್ನ ಕರ್ಕ, ಸೂರ್ಯಲಗ್ನ ವೃಶ್ಚಿಕ. ಲಗ್ನದಲ್ಲಿ ರಾಹು, ಚ೦ದ್ರ, ರವಿ, ಶನಿ ಇದ್ದಾರೆ. ಲಗ್ನ, ಚ೦ದ್ರ ಲಗ್ನಗಳು ದಗ್ಧರಾಶಿಗಳು. ರಾಹು ಯೋಗಿಯಾದರೂ ನೀಚಗಾಮಿ. ಶುಕ್ರ ಅವಯೋಗಿಯಾಗಿ ಲಾಭದಲ್ಲಿದ್ದಾನೆ. ಇಲ್ಲಿ ಶುಭನಾಗಿ ಸ್ವಕ್ಷೇತ್ರದಲ್ಲಿರುವ ಚ೦ದ್ರ ವರ್ಗಕು೦ಡಲಿಯಲ್ಲಿ ಎರಡು ಪಾಪ ವರ್ಗಗಳಲ್ಲಿ, ಎರಡು ಸ್ವಕ್ಷೇತ್ರದಲ್ಲಿ( ವರ್ಗೋತ್ತಮ) ಮೂರು ಶುಭ ವರ್ಗದಲ್ಲಿದ್ದು, ಗುರುವಿನ ಕೇ೦ದ್ರದಲ್ಲಿದ್ದು ಗಜಕೇಸರಿ ಯೋಗ ಉ೦ಟುಮಾಡುತ್ತಿದ್ದಾನೆ. ಆದರೆ ಲಗ್ನಾಧಿಪತಿಯೂ ಆಗಿರುವ ವಕ್ರೀ ಗುರು ಮಾರಕ, ಬಾಧಕಾಧಿಪತಿ ಬುಧ, ಷಷ್ಟಾಧಿಪತಿ ಶುಕ್ರ, ವ್ಯಯಾಧಿಪತಿ ಕುಜರ ದೃಷ್ಟಿಯಲ್ಲಿದ್ದು ಯೋಗ ಭ೦ಗವಾಗಿದೆ. ಅಲ್ಲದೇ ಚ೦ದ್ರ ಅಷ್ಟಮದಲ್ಲಿದ್ದಾನೆ. ಇದರಿ೦ದ ಚ೦ದ್ರ ಶುಭನಾದರೂ ಲಗ್ನ ಸಮವಾಗಿದೆ.

ದ್ವಿತೀಯ ಮಕರ, ಸಿ೦ಹ, ಧನು ರಾಶಿಗಳಾಗಿದ್ದು ಇಲ್ಲಿ ಕೇವಲ ರಾಹು ಇದ್ದಾನೆ. ಧನು, ಸಿ೦ಹಕ್ಕೆ ಗುರು, ಶನಿ ದೃಷ್ಟಿ ಇದೆ. ರಾಹು ಮೂರು ಶುಭವರ್ಗ ಮತ್ತು ನಾಲ್ಕು ಪಾಪ ವರ್ಗದಲ್ಲಿದ್ದು ಪಾಪಿ ಯಾಗಿದ್ದಾನೆ. ದ್ವಿತೀಯ ಪೀಡಿತವಾಗಿದೆ.

ತೃತೀಯ ಕು೦ಭ, ಕನ್ಯಾ, ಮಕರ ವಾಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ. ಮಕರ ಶನಿ, ಕುಜ, ಚ೦ದ್ರ ವೀಕ್ಷಿತವಾಗಿದೆ. ಕು೦ಭ, ಕನ್ಯಾಗಳಿಗೆ ಯಾವ ದೃಷ್ಟಿಯೂ ಇಲ್ಲ. ಇದರಿ೦ದ ತೃತೀಯ ಬಲಹೀನ ಮತ್ತು ಪೀಡಿತವಾಗಿದೆ.

ಚತುರ್ಥ ಮೀನ, ತುಲಾ, ಕು೦ಭವಾಗಿದೆ. ಇಲ್ಲಿ ಕುಜ, ಬುಧ ಶುಕ್ರ ಸ್ಥಿತರಿದ್ದಾರೆ. ಕುಜ ನಾಲ್ಕು ಸ್ವವರ್ಗ, (ಸಿ೦ಹಾಸನಾ೦ಶ)ಮೂರು ಶುಭ ವರ್ಗದಲ್ಲಿದ್ದಾನೆ. ಪ೦ಚಮಾಧಿಪನೂ ಆಗಿರುವುದರಿ೦ದ ಶುಭನೂ ಬಲಯುತನೂ ಆಗಿದ್ದಾನೆ. ಗುರು, ಕೇತು ದೃಷ್ಟ ನಾಗಿದ್ದಾನೆ. ಮೀನ, ಕು೦ಭಗಳಿಗೆ ಯಾವ ಸ೦ಬ೦ಧವೂ ಇಲ್ಲ, ಯಾವ ಗ್ರಹರೂ ಇಲ್ಲ. ಬುಧ ಐದು ಶುಭವರ್ಗ ಮತ್ತು ಎರಡು ಪಾಪ ವರ್ಗದಲ್ಲಿದ್ದಾನೆ. ಸಪ್ತಮ, ದಶಮಾಧಿಪತಿ ಯಾಗಿದ್ದಾನೆ. ಮಾರಕ, ಬಾಧಕನು ಹೌದು. ಆದರೂ ಮಿತ್ರ ಕ್ಷೇತ್ರ ಸ್ಥಿತನಿದ್ದು ಶುಭನಾಗಿದ್ದಾನೆ.ಶುಕ್ರ ಅವಯೋಗಿಯಾಗಿ ಸ್ವಕ್ಷೇತ್ರದಲ್ಲಿ ಲಾಭ ಸ್ಥಿತನಿದ್ದು ಮೂರು ಸ್ವವರ್ಗ, ಮತ್ತು ನಾಲ್ಕು ಶುಭವರ್ಗದಲ್ಲಿದ್ದಾನೆ. ಆದ್ದರಿ೦ದ ಷಷ್ಟಾಧಿಪನಾದರೂ ಶುಭನಾಗಿದ್ದಾನೆ. ಆದ್ದರಿ೦ದ ಚತುರ್ಥ ಸಾಕಷ್ಟು ಬಲಯುತವೂ ಶುಭವೂ ಆಗಿದೆ.

ಪ೦ಚಮ ಮೇಷ, ವೃಶ್ಚಿಕ, ಮೀನವಾಗಿದ್ದು ಇಲ್ಲಿ ವಕ್ರೀ ಗುರು, ಶನಿ, ರವಿ ಸ್ಥಿತರಿದ್ದಾರೆ. ಗುರು ಶುಭ, ಪಾಪ ದೃಷ್ಟಿ ಹೊ೦ದಿದ್ದಾನೆ. ನಾಲ್ಕು ಪಾಪ, ಮೂರು ಶುಭ ವರ್ಗದಲ್ಲಿ ಇದ್ದಾನೆ. ಮಿತ್ರ ಕ್ಷೇತ್ರದಲ್ಲಿದ್ದಾನೆ. ಲಗ್ನಾಧಿಪನಾದ್ದರಿ೦ದ ಸಮನಾಗಿದ್ದಾನೆ. ಶನಿ ಶತ್ರು ಕ್ಷೇತ್ರದಲ್ಲಿ, ನಾಲ್ಕು ಪಾಪ, ಮೂರು ಶುಭ ವರ್ಗದಲ್ಲಿ ವ್ಯಯ ಸ್ಥಿತನಿರುವುದರಿ೦ದ ಪಾಪಿ ಯಾಗಿದ್ದಾನೆ. ರವಿ ಭಾಗ್ಯಾಧಿಪತಿಯಾಗಿ ಮಿತ್ರ ಕ್ಷೇತ್ರದಲ್ಲಿ ವ್ಯಯಸ್ಥಿತನಿದ್ದಾನೆ. ಮೂರು ಪಾಪವರ್ಗ, ನಾಲ್ಕು ಶುಭವರ್ಗದಲ್ಲಿದ್ದಾನೆ. ಆದ್ದರಿ೦ದ ಸಮನಾಗಿದ್ದಾನೆ. ಇದರಿ೦ದ ಪ೦ಚಮ ಸಮವಾಗಿದೆ.

ಷಷ್ಟ ವೃಷಭ, ಧನು, ಮೇಷ ವಾಗಿದೆ. ಇಲ್ಲಿ ರಾಹು, ಗುರು ಸ್ಥಿತರಿದ್ದಾರೆ. ಇಲ್ಲಿ ಮೇಲೆ ತಿಳಿಸಿದ೦ತೆ ಗುರು ಸಮನೂ, ರಾಹು ಪಾಪಿಯೂ ಆಗಿದ್ದಾರೆ. ರಾಹುಗೆ ಗುರು ದೃಷ್ಟಿ ಇರುವುದರಿ೦ದ ಸಮನೆ೦ದು ಪರಿಗಣಿಸಬಹುದು.

ಸಪ್ತಮ ಮಿಥುನ, ಮಕರ, ವೃಷಭ ವಾಗಿದ್ದು ಇಲ್ಲಿ ಕೇತು ಸ್ಥಿತನಿದ್ದಾನೆ. ಕೇತು ಐದು ಶುಭ ಮತ್ತು ಎರಡು ಪಾಪ ವರ್ಗದಲ್ಲಿದ್ದಾನೆ. ಯಾವ ಸ೦ಬ೦ಧವೂ ಇಲ್ಲ. ಇದರಿ೦ದ ಶುಭ ನಾಗಿದ್ದಾನೆ.

ಅಷ್ಟಮ ಕರ್ಕ, ಕು೦ಭ, ಮಿಥುನ ವಾಗಿದ್ದು ಇಲ್ಲಿ ಚ೦ದ್ರ ಮತ್ತು ಕೇತು ಸ್ಥಿತರಿದ್ದಾರೆ. ಮೇಲೆ ತಿಳಿಸಿದ೦ತೆ ಚ೦ದ್ರ, ಕೇತು ಶುಭರಾಗಿದ್ದಾರೆ. ಇದರಿ೦ದ ಅಷ್ಟಮವೂ ಬಲಯುತವಾಗಿದೆ.

ನವಮ ಸಿ೦ಹ, ಮೀನ, ಕರ್ಕವಾಗಿದೆ. ಕಟಕ ದಗ್ಧರಾಶಿಯಾಗಿದೆ. ಇಲ್ಲಿ ಚ೦ದ್ರ ಸ್ಥಿತನಿದ್ದಾನೆ. ಇದರಿ೦ದ ನವಮ ಶುಭವಾಗಿದೆ.

ದಶಮ ಕನ್ಯಾ, ಮೇಷ, ಸಿ೦ಹ ವಾಗಿದ್ದು ಇಲ್ಲಿ ವಕ್ರೀ ಗುರು ಸ್ಥಿತನಿದ್ದಾನೆ. ಮೇಲೆ ತಿಳಿಸಿದ೦ತೆ ಗುರು ಸಮನಾಗಿದ್ದು ದಶಮ ಸಮನಾಗಿದೆ.

ಏಕಾದಶ ತುಲಾ, ವೃಷಭ, ಕನ್ಯಾ ಆಗಿದ್ದು ಇಲ್ಲಿ ಕುಜ, ಬುಧ, ಶುಕ್ರ ಸ್ಥಿತರಿದ್ದಾರೆ. ಮೇಲೆ ತಿಳಿಸಿದ೦ತೆ ಇವರಲ್ಲಿ ಮೂವರೂ ಶುಭ ರಾಗಿರುವುದರಿ೦ದ ಏಕಾದಶ ಶುಭವಾಗಿದೆ.

ದ್ವಾದಶ ವೃಶ್ಚಿಕ, ಮಿಥುನ, ತುಲಾ ವಾಗಿದ್ದು ಇಲ್ಲಿ ರವಿ, ಶನಿ, ಕುಜ, ಬುಧ, ಶುಕ್ರ, ಕೇತು, ಗುಳಿಕ ಸ್ಥಿತರಿದ್ದಾರೆ. ಕುಜ, ಬುಧ, ಶುಕ್ರ, ಕೇತು ಶುಭರಾಗಿದ್ದಾರೆ. ರವಿ ಸಮನಾಗಿದ್ದಾನೆ. ಶನಿ ಪಾಪಿ ಯಾಗಿದ್ದಾನೆ. ಇದರಿ೦ದ ದ್ವಾದಶ ಶುಭವೂ ಬಲಿಷ್ಠವೂ ಆಗಿದೆ.

ಇನ್ನು 4-5-1799 ರಲ್ಲಿ ಇವರಿಗೆ ಸುದರ್ಶನ ದಶಾ ದ೦ತೆ ಧನು-ಕರ್ಕ-ವೃಶ್ಚಿಕ ದಶಾ ( 1-1-1-ರಾಹು, ಚ೦ದ್ರ, ಶನಿ, ರವಿ, ಗುಳಿಕ ) ಕನ್ಯಾ-ಧನು-ಮೀನ( 10-6-5- ರಾಹು)ಭುಕ್ತಿ; ಮೇಷ-ತುಲಾ-ತುಲಾ (5-4-12,ಕುಜ, ಬುಧ, ಶುಕ್ರ) ಅ೦ತರ ಭುಕ್ತಿ; ಮಕರ-ಮಕರ-ಮಕರ (2-7-3-nil)ಸೂಕ್ಷ್ಮ; ಕು೦ಭ-ಕು೦ಭ-ಕು೦ಭ(3-7-4-nil) ಪ್ರಾಣ ದಶಾ ನಡೆಯುತ್ತಿದೆ.

ಇಲ್ಲಿ ನಾವು ಗಮನಿಸಬೇಕಾದ ಅ೦ಶ ಲಗ್ನ ದಶಾ ನಡೆಯುತ್ತಿದ್ದರೂ ರಾಹು ಅಥವ ಗುರು ಇವರಿಗೆ ಶುಭರಲ್ಲ. ಎರಡು ಲಗ್ನಗಳು ದಗ್ಧರಾಶಿ. ಷಷ್ಟ ದಶಾ ಚ೦ದ್ರ ನಿ೦ದ ಮಾತ್ರ ನಡೆಯುತ್ತಿದ್ದು ಮತ್ತೆ ಪಾಪಿ ಬಲಹೀನ ರಾಹುವೇ ಅಲ್ಲಿದ್ದಾನೆ. ಇನ್ನು ಅ೦ತರದಶಾ ಸ್ವಲ್ಪ ಉತ್ತಮವಾಗಿದ್ದರೂ ಮು೦ದಿನ ಎರಡೂ ಹ೦ತಗಳಲ್ಲಿ ಯರೂ ಇಲ್ಲ ಮತ್ತು ಅಧಿಪತಿ ಶನಿ ಇವರಿಗೆ ಪಾಪಿ ಯಾಗಿದ್ದು ಲಗ್ನದಿ೦ದ ವ್ಯಯದಲ್ಲಿದ್ದಾನೆ. ಇದು ಇವರಿಗೆ ಅಪಜಯ ಮತ್ತು ಪ್ರಾಣಕ್ಕೇ ಆಪತ್ತು ತ೦ದು ಒಡ್ಡಿದೆ. ಇದಕ್ಕೆ ನಾವು ಗೋಚಾರ ಸುದರ್ಶನ ಚಕ್ರ ಹಾಕಿಕೊ೦ಡರೆ ಹೆಚ್ಚು ಸ್ಫಷ್ಟ ನಿರ್ಣಯ ಸಿಗುತ್ತದೆ.

TRANSIT

4-5-1799

9-22                                                         Transit  ಇಲ್ಲಿ ಕ್ಲಿಕ್ ಮಾಡಿ                    

MYSORE

Dasha-2

ವಿ೦ಶೋತ್ತರಿ ದಶಾ ಮತ್ತು ಸುದರ್ಶನ ಚಕ್ರದಶಾಗೆ  ಇಲ್ಲಿ ಕ್ಲಿಕ್ ಮಾಡಿ

 

ಇಲ್ಲಿ ದಶಾ ಧನು ಅಷ್ಟಮವಾಗಿದೆ. ಜನ್ಮದಲ್ಲಿ ಅಲ್ಲಿರುವ ರಾಹು ಗೋಚಾರದಲ್ಲಿ ತ್ರಿಕೋಣದಲ್ಲಿ ಸ೦ಚರಿಸುತ್ತಿದ್ದಾನೆ. ಚ೦ದ್ರ ದಶಾ ಕರ್ಕ ಚತುರ್ಥ ದಶಾ ಆಗಿದ್ದು ಲಗ್ನದಲ್ಲಿ ರಾಹು ಮತ್ತು ಮಾರಕಾಧಿಪತಿ ರವಿಯೊಡನೆ ಇದ್ದಾನೆ. ಇದರಿ೦ದ ರಾಹು ಹೆಚ್ಚು ಮಾರಕನಾಗುತ್ತಾನೆ. ರವಿ ಲಗ್ನ ವೃಶ್ಚಿಕ ನವಮ ದಶಾ ಅಗಿದೆ. ಇಲ್ಲಿ ರವಿ, ಚ೦ದ್ರ, ಬುಧ, ರಾಹು, ಗುಳಿಕ ಸ್ಥಿತರಿದ್ದಾರೆ. ಈ ಲಗ್ನಕ್ಕೆ ಬುಧ ಅಷ್ಟಮಾಧಿಪತಿ ಯಾಗಿದ್ದು ಮಾರಕ ಸ್ಥಾನ ಸ್ಥಿತ ರಾಹು ಒಡನೆ ಇದ್ದಾನೆ. ಜನ್ಮ ಬುಧನಿ೦ದ ಸಪ್ತಮದಲ್ಲಿ ಸ೦ಚರಿಸುತ್ತಿದ್ದಾನೆ. ಲಗ್ನ ಅತಿ ಹೆಚ್ಚು ಮಾರಕ ಪರಿಣಾಮಕ್ಕೆ ಒಳಗಾಗಿರುವುದನ್ನು ಗಮನಿಸಬಹುದು.   -ಭುಕ್ತಿ-ಅ೦ತರ-ಸೂಕ್ಷ್ಮ –ಪ್ರಾಣ ದಶಾ ರಾಶಿಗಳು, ಮಾರಕ, ಬಾಧಕ, ಅಷ್ಟಮ, ದ್ವಾದಶ ಗಳಲ್ಲಿ ಬ೦ದಿರುವುದನ್ನು ಮತ್ತು ಸ೦ಬ೦ಧ ಪಟ್ಟ ಗ್ರಹರು ಜನ್ಮ ಸ್ಥಾನದಿ೦ದ ತ್ರಿಕೋಣ, ಅಥವ ದೃಷ್ಟಿಯಲ್ಲಿ ಬ೦ದಿರುವುದನ್ನು ನಾವು ಗಮನಿಸಬಹುದು.

ಇನ್ನು ವಿ೦ಶೋತ್ತರಿಯ೦ತೆ ಇವರಿಗೆ ಕುಜ-ಬುಧ-ಬುಧ-ಶುಕ್ರ ದಶಾ –ಭುಕ್ತ್ಯಾದಿಗಳು ನಡೆಯುತ್ತಿವೆ.

ಕುಜ ದಶಾ ಭುಧ ಭುಕ್ತಿ:- ಬುಧ 6,8,12 ರಲ್ಲಿದ್ದರೆ, ನೀಚ, ಅಸ್ತನಾಗಿದ್ದರೆ, ಬ೦ಧುನಷ್ಟ, ಹೃದಯಬೇನೆ, ಬ೦ಧನಯೋಗ, ಪತ್ನಿ,ಪುತ್ರರಿಗೆ ಸ೦ಕಷ್ಟ, ಸ೦ಪತ್ತು, ಪಶು ಸ೦ಪತ್ತು ನಷ್ಟ, ಉ೦ಟಾಗುತ್ತದೆ. ಬುಧ ದಶಾನಾಥ ಕುಜನೊಡನೆ ಇದ್ದರೆ, ಪರದೇಶಪ್ರವಾಸ, ಶತ್ರುವೃದ್ಧಿ, ಹಲವುರೋಗಗಳು, ರಾಜವಿರೋಧ, ಬ೦ಧುಗಳೊಡನೆ ಜಗಳ ಉ೦ಟಾಗುತ್ತದೆ. ಬುಧ-ದಶಾನಾಥ ಕುಜನಿ೦ದ ಕೇ೦ದ್ರ, ತ್ರಿಕೋಣ, ಉಚ್ಛ, ರಾಶಿಯಲ್ಲಿದ್ದರೆ, ಮಹತ್ವಾಕಾ೦ಕ್ಷೆಯ ಈಡೇರಿಕೆ, ಬಹುವಿಧ ಧನಲಾಭ, ರಾಜಗೌರವ, ರಾಜ್ಯಲಾಭ, ಆಭೂಷಣ, ಆಭರಣ, ಸ೦ಗೀತವಾದ್ಯಗಳ ಲಾಭ, ಉನ್ನತ ಸ್ಥಾನಮಾನ, ಶಾಸ್ತ್ರಾದಿಗಳ ಚರ್ಚೆ, ಪತ್ನಿ,ಪುತ್ರರಿಗೆ ಸ೦ಪತ್ತು ಲಾಭ, ಲಕ್ಷ್ಮೀಕಟಾಕ್ಷ, ಮು೦ತಾದವು ಉ೦ಟಾಗುತ್ತದೆ. ಬುಧ-ದಶಾನಾಥ ಕುಜನಿ೦ದ 6,8,12, ಮತ್ತು ಪಾಪಯುತ,ದೃಷ್ಟನಾಗಿ ಸ್ಥಿತನಾದರೆ, ಅಪಮಾನ, ಪಾಪಚಿ೦ತನೆ, ಕಠಿಣಮಾತು, ಚೋರಭಯ, ಅಗ್ನಿ ಮತ್ತು ರಾಜಭಯ, ವಿನಾಕಾರಣ ಜಗಳ, ಮು೦ತಾದ ಅನಿಷ್ಠ ಫಲ ಉ೦ಟಾಗುತ್ತದೆ. ಬುಧ– ದ್ವಿತೀಯ, ಸಪ್ತಮಾಧಿಪನಾದರೆ, ತೀವ್ರ ರೋಗಬಾಧೆ, ಉ೦ಟಾಗುತ್ತದೆ. ವಿಷ್ಣುಸಹಸ್ರನಾಮ ಜಪ, ಕುದುರೆ ದಾನ ಇದಕ್ಕೆ ಪರಿಹಾರ ವಾಗುತ್ತದೆ.

ಇಲ್ಲಿಯೂ ಕೂಡ ದಶಾನಾಥ ಕುಜ ವ್ಯಯದಿ೦ದ ಫಲನೀಡುತ್ತಿದ್ದು, ಭುಕ್ತಿ ಮು೦ದಿನ ಛಿದ್ರ ದಶಾನಾಥ ಬುಧ ಇವರಿಗೆ ಮಾರಕ-ಬಾಧಕನಾಗಿದ್ದಾನೆ. ಸೂಕ್ಷದಶಾನಾಥ ಶುಕ್ರ ದಶಾನಾಥನಿ೦ದ ಅಷ್ಟಮಾಧಿಪತಿಯಾಗಿ ದಶಾ-ಭುಕ್ತಿ ನಾಥ ರೊಡನಿದ್ದಾನೆ. ಇದರಿ೦ದ ಜಾತಕರು ಸಾಕಷ್ಟು ಅಪಮಾನಾದಿಗಳನ್ನು ಸಹಿಸಿ ಕೊನೆಗೆ ಸಾವನ್ನಪ್ಪಿದರು.

 


Follow Me
RSS

No Comments - Leave a comment

Leave a comment

Your email address will not be published. Required fields are marked *


Welcome , today is Tuesday, May 23, 2017