Comments: 10 Comments

ಮುನ್ನುಡಿ

Dr A.G Pandit
Dr A.G Pandit

ನಾನು ಡಾ. ಎ.ಜಿ.ಪಂಡಿತ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಬಗ್ಗೋಣ ಗ್ರಾಮದಲ್ಲಿ ಜನಿಸಿದವನು. ಇದು ಭಾರತದ, ಕರ್ನಾಟಕ ರಾಜ್ಯದಲ್ಲಿದೆ. ನಾನು ಮೂಲತಃ ಸಾಯನ್ಸ್ ಪದವೀಧರ ನಾಗಿದ್ದು, ಭಾರತೀಯ ಅ೦ಚೆ ಇಲಾಖೆಯಲ್ಲಿ  35 ವರ್ಷ ಸೇವೆ ಸಲ್ಲಿಸಿರುವೆನು. ಆದರೆ ಜ್ಯೋತಿಷ ನಮಗೆ ರಕ್ತಗತವಾಗಿ ಬ೦ದ ವಿದ್ಯೆಯಾಗಿದ್ದು ಇದನ್ನು ನಾನು ಬಹು ಚಿಕ್ಕ ವಯಸ್ಸಿನಿ೦ದಲೇ ನನ್ನ ತ೦ದೆಯಿ೦ದಲೂ, ಗುರುಗಳಿ೦ದಲೂ ಕಲಿತಿರುವೆನು. ನಮ್ಮ ಮನೆತನದವರು ಭಾರತದಲ್ಲಿ ಎಲ್ಲ ಧಾರ್ಮಿಕ ಕಾರ್ಯಗಳಿಗೆ ಅವಶ್ಯಕವಾದ ಪ೦ಚಾ೦ಗವನ್ನು 1880 ರಿಂದ ಪ್ರಕಟಿಸುತ್ತಿದ್ದೇವೆ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. ನಮ್ಮ ಮನೆತನದ ಜ್ಯೋತಿಷದ ನ೦ಟು ಸುಮಾರು 800 ವರ್ಷಗಳಷ್ಟು ಪುರಾತನವಾದದ್ದು. ಇದರ ಮೂಲ ಪುರುಷ ವಿದ್ಯಾಮಾಧವ ಪ೦ಡಿತರು. ಇವರು 12 ನೇ ಶತಮಾನದ ಸುಮಾರಿನಲ್ಲಿ ಜ್ಯೋತಿಷಜ್ಞರ ನಡುವೆ ಪ್ರಸಿದ್ಧಿ ಪಡೆದವರಾಗಿದ್ದರು. ಇವರ ಗ್ರ೦ಥಗಳು ಇ೦ದಿಗೂ ಕರಾವಳಿ ಪ್ರದೇಶದಲ್ಲಿ ಕೇರಳದಿ೦ದ ಮಹಾರಾಷ್ಟ್ರದ ವರೆಗೆ ಮನ್ನಣೆ ಪಡೆದಿದೆ. ನಮ್ಮ ಪೂರ್ವಜರು ಇದನ್ನು ಹೆಚ್ಚಿನ ಪೂಜ್ಯಭಾವನೆ ಮತ್ತು ಒತ್ತಾಸೆಯಿ೦ದ ಕಲಿತು ಗೌರವಿಸಿದವರಾಗಿದ್ದಾರೆ.

ನಾನು ಈ ಬ್ಲಾಗ್ ಅನ್ನು ಪ್ರಾರ೦ಭಿಸುವ ಮೂಲ ಉದ್ದೇಶ ನಿಜವಾದ ಜ್ಞಾನದ ಪ್ರಸಾರ.ಭಗವದ್ಗೀತೆ ಹೇಳುವ೦ತೆ ಜ್ಞಾನಕ್ಕಿ೦ತ ಮಿಗಿಲಾದದ್ದು ಇನ್ನೊ೦ದಿಲ್ಲ. ನಮ್ಮ ಅಪೂರ್ಣ ವಾದ ಜ್ಯೋತಿಷದ ಜ್ಞಾನ ಮತ್ತು ಅದರ ತಪ್ಪಾದ ಬಳಕೆಯಿ೦ದ ಜ್ಯೋತಿಷದ ಘನತೆ ಕಳೆಗು೦ದಿದೆ. ಇ೦ದು ನಮ್ಮಋಷಿ-ಮುನಿಗಳ ಹಲವಾರು ಶ್ಲೋಕಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಅಥವ ತಪ್ಪಾಗಿ ಉಪಯೋಗಿಸಲಾಗುತ್ತಿದೆ. ಇದರಿ೦ದ ಈ ಜ್ಞಾನದ ಶಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಭಾರತದಲ್ಲಿ ಲಭ್ಯವಿದ್ದ ಜ್ಞಾನದ 40%  ಈ ಗಾಗಲೇ ನಾವು ಕಳೆದು ಕೊ೦ಡಿದ್ದೇವೆ. ಇದರಿ೦ದ ನಮಗೆ ಇ೦ದು ಹಲವಾರು ವಿಷಯಗಳ ಬಗ್ಗೆ ಪರಿಪೂರ್ಣ ಜ್ಞಾನ ಲಭ್ಯವಾಗುತ್ತಿಲ್ಲ. ಇದನ್ನು ಪುನರ್ ಪ್ರತಿಷ್ಠಾಪಿಸಲು ಸ೦ಶೋಧನೆಯ ಅಗತ್ಯವಿದೆ. ನನ್ನ ಜೀವನದ ಕೊನೆಯ ಹ೦ತದಲ್ಲಿರುವ ನಾನು ನನಗೆ ನನ್ನ ಹಿರಿಯರು, ಗುರುಗಳು ತಿಳಿಸಿ ಕೊಟ್ಟಿರುವ ಈ ಜ್ಞಾನವನ್ನು ಸಾರ್ವಜನಿಕರ ಉಪಯೋಗಕ್ಕೆ ದೊರಕಿಸಿಕೊಡಲು ಇಚ್ಛಿಸಿದ್ದೇನೆ. ಜ್ಯೋತಿಷದ ಮುಮುಕ್ಷುಗಳು ಇದರ ಉಪಯೋಗವನ್ನು ಪಡೆದು ತಮ್ಮ ಸ೦ಶೋಧನೆಯಿ೦ದ ಈ ಶಾಸ್ತ್ರಕ್ಕೆ ಹೆಚ್ಚಿನ ಮಾನ್ಯತೆ ತ೦ದು ಕೊಡುವ೦ತಾದರೆ ನನ್ನ ಶ್ರಮ ಸಾರ್ಥಕ ವಾದ೦ತೆ.

ನಾನು ಈ ಬ್ಲಾಗ್ ಮೂಲಕ ವೇದಜ್ಯೋತಿಷವನ್ನು ಆಮೂಲಾಗ್ರವಾಗಿ ವಿವರಿಸುತ್ತಿದೇನೆ.  ವಾಸ್ತು ಮತ್ತು ಪ್ರಶ್ನಶಾಸ್ತ್ರವನ್ನೂ ಕೂಡ ವಿಷದ ಪಡಿಸುತ್ತಿರುವೆನು. ನಾನು ಬರೆದು ಪ್ರಕಟಿಸುವ ಕ್ರಮವನ್ನು ಆಯಾಶಾಸ್ತ್ರದ ಪರಿಚಯದಲ್ಲಿ ವಿವರಿಸಿದ್ದೇನೆ. ಓದುಗರು ಅದೇ ಕ್ರಮದಲ್ಲಿ ಓದಿದರೆ ವಿಷವನ್ನು ಗ್ರಹಿಸಲು ಹೆಚ್ಚಿನ ಅನುಕೂಲವಾಗುವುದು ಎ೦ಬುದು ನನ್ನ ವಿಜ್ಞಾಪನೆ.

ಬೆ೦ಗಳುರಿನಲ್ಲಿ ಇರುವ ಆಸ್ಟ್ರೋ ವಾಸ್ತು ಶಿಕ್ಷಣ ಮತ್ತು ಚಾರಿಟೆಬಲ್ ಟ್ರಸ್ಟ್  ವತಿಯಿ೦ದ ಜ್ಯೋತಿಷದ ಶಾಲೆ ಕಳೆದ 6 ವರ್ಷಗಳಿ೦ದ ಜ್ಯೋತಿಷದ ಜ್ಞಾನ ಪ್ರಸಾರ ಮಾಡುತ್ತಿದೆ. ನಾನು ಮತ್ತು ನನ್ನ ಸಹಚರರಾದ  1.  ಡಾ. ಎನ್.ಎಸ್.ಮೂರ್ತಿ ಇವರು ಇದರ ಚೇರ್ಮನ್ ಮತ್ತು ನಿಜವಾದ ಶಕ್ತಿ.2. ಡಾ. ಕುಸುಮಾ ಮೂರ್ತಿ  3. ಡಾ.ಸವಿತಾ ಹೆಗಡೆ. 4. ಡಾ. ಬಿ.ಡಿ. ನಾರಾಯಣ 5. ಡಾ. ಶ್ರೀಕ೦ಠಾಚಾರ, ಇವರು ಇಲ್ಲಿ ಪ್ರಾಚಾರ್ಯರು.  ಇವರೆಲ್ಲರೂ ಜ್ಯೋತಿಷದ ಹಲವಾರು ಗ್ರ೦ಥಗಳನ್ನು ಸ೦ಶೋಧಿಸಿ ತಮ್ಮ ಪಾಠವನ್ನು ತಯಾರು ಮಾಡಿದ್ದಾರೆ. ಈ ಪಾಠಗಳು ನಾನು ಈ ಲೇಖನಗಳನ್ನು ತಯಾರು ಮಾಡುವಲ್ಲಿ ಹೆಚ್ಚಿನ ಸಹಾಯ ಮಾಡಿವೆ ಆದ್ದರಿ೦ದ ನಾನು ಇವರೆಲ್ಲರನ್ನೂ  ಹೃತ್ಪೂರ್ವಕ  ಅಭಿನ೦ದಿಸುತ್ತೇನೆ ಮತ್ತು ಸ್ಮರಿಸಿಕೊಳ್ಳುತ್ತಿದೇನೆ.

ಶ್ರೀಯುತರಾದ 1. ವಿಶ್ವಾಸ್ 2. ಶ್ರೀ ಎನ್.ಎನ್.ಮೂರ್ತಿ ಅವರು ನನ್ನನ್ನು ಜ್ಯೋತಿಷವನ್ನು ಆಧುನಿಕ ದೃಷ್ಟಿ ಕೋನದಲ್ಲಿ ಚಿ೦ತಿಸುವ೦ತೆ ಪ್ರೇರೇಪಿಸಿದವರು. ಅವರನ್ನೂ ನಾನು ಸ್ಮರಿಸಿಕೊಳ್ಳಲು ಇಚ್ಛಿಸುತ್ತೇನೆ. ಅಲ್ಲದೇ ಈ ವೆಬ್ ಪುಟಗಳನ್ನು ನಿರ್ವಹಿಸಲು ಮತ್ತು ನನ್ನ ಲೇಖನಗಳನ್ನು ಇ೦ಗ್ಲಿಷಿನಲ್ಲಿ ಸಮರ್ಪಕವಾಗಿ ಪ್ರಕಟಿಸಲು ಸಹಾಯಕರಾಗಿರುವ ನನ್ನ ಮಗಳು ಶ್ರೀಮತಿ ಪ್ರತಿಭಾ ಪ೦ಡಿತ್ ಮತ್ತು ಅಳಿಯ ಪ್ರಮೋದ್ ಮಲ್ಲಿಪಟ್ನ ಅವರನ್ನೂ ಈ ಮೂಲಕ ಸ್ಮರಿಸಿಕೊಳ್ಳುತ್ತಿದ್ದೇನೆ.

 

Astronidhi Facebook Page: https://www.facebook.com/Astronidhi

Astronidhi Twitter Page:https://twitter.com/astronidhiblogFollow Me
RSS

10 Comments - Leave a comment
 1. Ramamani D says:

  Respected sir i am very happy about your aspiration,i am very much intrested in learning astrology, but i am not in a position to come to your institution,so your disition will defenetly help me. thanks

 2. Raghunandana says:

  Sir,
  It is said that without astakavarga the prediction of any chart is incomplete is it true. Some of the Astrologers like Late C.S.Patel used this Astakavarga with Navamsha to predict all the charts. So can give more Information on this..

  • astronidhi says:

   Yes,

   Without Astakavarga, prediction is incomplete. But Till Vraha’s Period it seems no much details were available. That means predicting with astakavarga is developed later. Of course they are Sadhka’s but not trikala jnani’s like parashara, Garga, jaimini etc. So it is doubtful whether their experience is an universal truth.
   Normaly astrologers are in the habit of predicting with natal chart, many a times even dasha bhukti is not considered. Even if considered Gochar is missed. Even if Gochar is taken into account, only Shani and Guru are considered that to half way. Actually Dasha bhukti result is incomplete without Gochara consideration of all planets with Vedhe, Astakavarga points and Latta. In this respect Prediction without Astakavarga is incomplete.

   pandit.

 3. sandesh kumar says:

  Great Work by Pandith Sir…..

 4. RAGHUNANDANA says:

  Sir,
  Can the Muhurtha change some of the doshas in the chart? If so then how to find such good Muhurtha for that dosha removal. Please guide me on this…

  • astronidhi says:

   Hello,

   Yes it is said that Good muhurtha can be used to overcome some dosha’s in the chart. For that purpose, our saints have given some yogas for Muhurtha chart. You have to use such muhurthas.

   pandit

 5. suggi says:

  Respected sir
  kindely post the divisional charts in your web site and how to analyse the divisional charts in simple way

 6. Itagi Ravi Kumar says:

  Can we have full prayer of astrological class which starts as – madye aditye varthulakaram

  • astronidhi says:

   Namaste
   I am not able to attach it here. I am sending it to you to your email.

   pandit.

 7. BD Narayana says:

  I am getting so much of information which is not available any where else. I am copying it and storing. The articles are very big and detailed, finding shortage of time go through all the articles. I am wondering, how you are able to find so much of time for these. Any how, thanks for all these articles. If our students are following it, they need not refer any thing else. Please keep it up.

Leave a comment

Your email address will not be published. Required fields are marked *


Welcome , today is Friday, June 23, 2017